ಮಣಿಪಾಲ: ವಿದ್ಯಾರತ್ನ ನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದರ 2 ನೇ ಮಹಡಿ ಮತ್ತು ಮೊದಲನೇ ಮಹಡಿಯ ರೂಮ್ ಗಳಿಗೆ ಕಳ್ಳರು ಪ್ರವೇಶಿಸಿ ಎರಡು ರೂಮ್ಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ.
Advertisement
ಲ್ಯಾಪ್ ಟಾಪ್, ಕೆನಾನ್ ಕಂಪನಿಯ ಕ್ಯಾಮರಾ, ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್, ಪರ್ಸ್ ಮತ್ತು 3 ಮೊಬೈಲ್ಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಒಟ್ಟು ಮೌಲ್ಯ 3,23,500 ರೂ. ಎಂದು ಅಂದಾಜಿಸಲಾಗಿದೆ. ಜನವರಿ 28 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪ್ರವೀಣ್ ಕುಮಾರ್ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.