Advertisement

Manipal KMC; ವಿಶ್ವ ಆರೋಗ್ಯ ದಿನದ ಆಚರಣೆ

08:16 PM Apr 08, 2024 | Team Udayavani |

ಮಣಿಪಾಲ: “ಪ್ರತಿ ವರ್ಷ ಏಪ್ರಿಲ್ 7 ಅನ್ನು ವಿಶ್ವದಾದ್ಯಂತ ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಉತ್ತಮ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. 2024 ರ ದ್ಯೇಯ ವಾಕ್ಯ “ನನ್ನ ಆರೋಗ್ಯ ನನ್ನ ಹಕ್ಕು”, ಇದು ಅಗತ್ಯ ಆರೋಗ್ಯ ಸೇವೆಗಳ ಪ್ರವೇಶದ ಸವಲತ್ತು ಎಂದು ಪರಿಗಣಿಸದೆ, ಮೂಲಭೂತ ಮಾನವ ಹಕ್ಕು ಎಂದು ಪರಿಗಣಿಸಬೇಕಾದ ಅಗತ್ಯವನ್ನು ಒತ್ತಿಹೇಳುತ್ತದೆ.

Advertisement

ಇದರ ಚಟುವಟಿಕೆಗಳ ಭಾಗವಾಗಿ ಕಸ್ತೂರ್ಬಾ ಆಸ್ಪತ್ರೆಯ ಶುಶ್ರೂಷಾ ತಂಡವು ಸಮುದಾಯವನ್ನು ಆರೋಗ್ಯ ಚಟುವಟಿಕೆಗಳಳ್ಳಿ ತೊಡಗಿಸಿಕೊಳ್ಳುವ ಉತ್ಕಟ ಸಂಕಲ್ಪದೊಂದಿಗೆ ಆಸ್ಪತ್ರೆಯ ಹೊರರೋಗಿ ವಿಭಾಗದ (OPD) ಮುಂಭಾಗದಲ್ಲಿ ಬೀದಿ ನಾಟಕಗಳ ಮೂಲಕ, ಪ್ರೇಕ್ಷಕರನ್ನು ಆಕರ್ಷಿಸಿತು, ಉತ್ತಮ ಆರೋಗ್ಯದ ಅರಿವು ಮತ್ತು ರೋಗ ತಡೆಗಟ್ಟುವಿಕೆ ಕುರಿತು ಪ್ರಮುಖ ಸಂದೇಶಗಳನ್ನು ನೀಡಿತು.

ಅಲ್ಲದೇ ಆಸ್ಪತ್ರೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಎಲ್ಲಾ ವರ್ಗದ ವ್ಯಕ್ತಿಗಳಿಗೆ ಆರೋಗ್ಯ ಸೇವೆ ನೀಡುವ ಬದ್ಧತೆಗೆ ಸಾಕ್ಷಿಯಾಯಿತು. ಈ ಉಪಕ್ರಮವು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಆರೋಗ್ಯ ರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ ಎಂದು ಖಚಿತಪಡಿಸಿಕೊಳ್ಳುವ ಅಚಲ ಬದ್ಧತೆಯನ್ನು ಒತ್ತಿಹೇಳಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ಅವರು , “ಮೊದಲು ಸೋಂಕು ಕಾಯಿಲೆಗಳು ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇತ್ತು ಆದರೆ ಈಗ ಅಸಾಂಕ್ರಾಮಿಕ ಮತ್ತು ಜೀವನಶೈಲಿಯಿಂದ ಬರುವ ಕಾಯಿಲೆಗಳು, ಮಧುಮೇಹ, ಹೃದ್ರೋಗ, ಕಿಡ್ನಿ ಕ್ಯಾನ್ಸರ್ ಇತ್ಯಾದಿಗಳ ತಡೆಗಟ್ಟುವ ಕುರಿತು ಮಾಹಿತಿ ಮತ್ತು ಅರಿವು ಮೂಡಿಸುವ ಅವಶ್ಯಕತೆ ಇದೆ. ಇಂತಹ ಕಾರ್ಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಯಾವಾಗಲೂ ಮುಂಚೂಣಿಯಲ್ಲಿದೆ” ಎಂದು ಹೇಳಿದರು.

Advertisement

ಶುಶ್ರೂಷಾ ತಂಡ, ಆರೋಗ್ಯ ವೃತ್ತಿಪರರು ಮತ್ತು ಸ್ವಯಂಸೇವಕರ ಸಂಯೋಜಿತ ಪ್ರಯತ್ನಗಳು ಈ ಅದ್ಭುತ ಯಶಸ್ಸಿನ ಭಾಗವಾಯಿತು. ಸುಮಾರು 1000 ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next