Advertisement

Manipal: ಮಾಧವಕೃಪಾ ಶಾಲೆಯ ಡೈಮಂಡ್‌ ಜ್ಯುಬಿಲಿ ಬ್ಲಾಕ್‌ ಉದ್ಘಾಟನೆ

01:10 AM Mar 21, 2024 | Team Udayavani |

ಮಣಿಪಾಲ: ಮಾಧವ ಕೃಪಾ ಶಾಲೆಯ ಕ್ಯಾಂಪಸ್‌ನಲ್ಲಿ ನಿರ್ಮಿಸಿರುವ ಡೈಮಂಡ್‌ ಜ್ಯುಬಿಲಿ ಬ್ಲಾಕ್‌ನ ಉದ್ಘಾಟನೆಯನ್ನು ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ ಹಾಗೂ ಅಧ್ಯಕ್ಷ ಡಾ| ರಂಜನ್‌ ಆರ್‌. ಪೈ ಬುಧವಾರ ಉದ್ಘಾಟಿಸಿದರು.

Advertisement

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸಂತಿ ಆರ್‌. ಪೈ ಅವರು ಮಾತನಾಡಿ, ಶಿಕ್ಷಕರೇ ಶಾಲೆಯ ಬೆನ್ನೆಲುಬು. ಅವರ ಶೈಕ್ಷಣಿಕ ಅರ್ಹತೆ ಹಾಗೂ ಜ್ಞಾನ ಮಟ್ಟ ಉತ್ತಮವಾಗಿದ್ದರೆ ಶಾಲೆಯ ಶೈಕ್ಷಣಿಕ ಗುಣಮಟ್ಟವೂ ಶ್ರೇಷ್ಠವಾಗಿರುತ್ತದೆ. ದಶಕಗಳಿಂದ ಮಾಧವ ಕೃಪಾ ಶಾಲೆಯು ಶೈಕ್ಷಣಿಕ ಗುಣಮಟ್ಟದಲ್ಲಿ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬರುತ್ತಿದೆ. ಸಾಧನೆ, ಯಶಸ್ಸಿಗೆ ಯಾವುದೇ ಅಡ್ಡ ಮಾರ್ಗ ವಿಲ್ಲ. ಕಠಿನ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಶುಭ ಹಾರೈಸಿದರು.

ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಕೆಎಂಸಿ ಮಾಹೆ ವಿ.ವಿ.ಯ ಕಿರೀಟವಿರು ವಂತೆ, ಮಾಧವ ಕೃಪಾ ಶಾಲೆಯು ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಕಿರೀಟವಿದ್ದಂತೆ. ಶಿಕ್ಷಣ ಸಂಸ್ಥೆಯ ಪ್ರಗತಿಗೆ ನಾಯಕತ್ವ ಮುಖ್ಯ. ಸದ್ಯ ಮಾಧವ ಕೃಪಾ ಶಾಲೆಯಲ್ಲಿ ಸುಮಾರು 3 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಗುಣಮಟ್ಟವು ಸಮಾಜ ಹಾಗೂ ದೇಶ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಸಂಸ್ಥೆಗಳ ಸಂಸ್ಥಾಪಕರಾದ ಡಾ| ಟಿಎಂಎ ಪೈ ಅವರ ದೂರದೃಷ್ಟಿಯ ಚಿಂತನೆ, ಯೋಜನೆಗಳನ್ನು ಮಾಹೆ ಕುಲಾಧಿಪತಿಯಾಗಿರುವ ಡಾ| ರಾಮದಾಸ ಪೈ ಹಾಗೂ ಮಾಹೆ ಟ್ರಸ್ಟ್‌ನ
ಮುಖ್ಯಸ್ಥರಾದ ಡಾ| ರಂಜನ್‌ ಆರ್‌. ಪೈ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದರು.

ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಮಾತನಾಡಿ, ಸಕಾರಾತ್ಮಕ ಕಲಿಕೆಗೆ ಪೂರಕ ವಾತಾವರಣ ಹಾಗೂ ಪ್ರೋತ್ಸಾಹ ಮಾಧವ ಕೃಪಾದಲ್ಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸು ಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ. ವಿದ್ಯಾರ್ಥಿ ಗಳ ಸರ್ವಾಂಗೀಣ ಅಭಿವೃದ್ಧಿಗೆ ಈ ಶಾಲೆ ಪ್ರೇರಕ ಶಕ್ತಿಯಾಗಿದೆ ಎಂದು ಬಣ್ಣಿಸಿದರು.

Advertisement

ಡಾ| ಟಿಎಂಎ ಫೌಂಡೇಶನ್‌ ಅಧ್ಯಕ್ಷರೂ ಆದ ಶಾಲೆಯ ಸಲಹ ಮಂಡಳಿಯ ಸದಸ್ಯ ಟಿ. ಅಶೋಕ್‌ ಪೈ, ಎಜಿಇ ಕಾರ್ಯದರ್ಶಿ ವರದರಾಯ ಪೈ ಉಪಸ್ಥಿತರಿದ್ದರು.ಪ್ರಾಂಶುಪಾಲೆ ಜೆಸ್ಸಿ ಆ್ಯಂಡ್ರೂéಸ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಾಲೆಯ ಕರೆಸ್ಪಾಂಡೆಂಟ್‌ ರಾಧಿಕಾ ಪೈ ವಂದಿಸಿ ದರು. ಉಪಪ್ರಾಂಶುಪಾಲೆ ಜ್ಯೋತಿ ಸಂತೋಷ್‌ ನಿರೂಪಿಸಿದರು. ಸಭೆಯ ಅನಂತರ ಗಣ್ಯರು ಡೈಮಂಡ್‌ ಜ್ಯುಬಿಲಿ ಬ್ಲಾಕ್‌ ಉದ್ಘಾಟನೆಯ ಸವಿ ನೆನಪಿಗಾಗಿಕ್ಯಾಂಪಸ್‌ ಆವರಣದಲ್ಲಿ ಗಿಡಗಳನ್ನು ನೆಟ್ಟರು. ನೂತನ ಬ್ಲಾಕ್‌ನ ನೆಲ ಅಂತಸ್ತಿ ನಲ್ಲಿ ಕಚೇರಿ, ಮೊದಲ ಮಹಡಿಯಲ್ಲಿ ಗ್ರಂಥಾಲಯ, 2ನೇ ಮಹಡಿಯಲ್ಲಿ ಕಂಪ್ಯೂಟರ್‌ ಲ್ಯಾಬ್‌ ಇದೆ.

Advertisement

Udayavani is now on Telegram. Click here to join our channel and stay updated with the latest news.

Next