Advertisement

Manipal ಕ್ರೈಸ್ಟ್‌ ಶಾಲೆಯ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ

12:59 AM Oct 11, 2024 | Team Udayavani |

ಮಣಿಪಾಲ: ಇಲ್ಲಿನ ಕ್ರೈಸ್ಟ್‌ ಶಾಲೆಯ ಹತ್ತನೆಯ ತರಗತಿ ವಿದ್ಯಾರ್ಥಿ ದೀಪೇಶ್‌ ಶೆಟ್ಟಿಗಾರ್‌ ಅವರು ದಾವಣಗೆರೆಯಲ್ಲಿ ಜರಗಿದ ಸಿಬಿಎಸ್‌ಇ ಕ್ಲಸ್ಟರ್‌ ಮಟ್ಟದ ಕ್ರೀಡಾಕೂಟದಲ್ಲಿ 17ರ ವಯೋಮಾನದ 100 ಮೀ. ಮತ್ತು 200 ಮೀ. ಓಟದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಉತ್ತರ ಪ್ರದೇಶ ವಾರಾಣಸಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

Advertisement

ದಾವಣಗೆರೆಯಲ್ಲಿ ನಡೆದ ಕೂಟದಲ್ಲಿ ಅವರು ವೈಯಕ್ತಿಕ ಚಾಂಪಿಯನ್‌ ಪ್ರಶಸ್ತಿ ಪಡೆದಿದ್ದಾರೆ. ಇದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಲಿಸ್ಟಾರ್‌ ಸ್ಯಾಮ್‌ ಅಂದ್ರಾದೆ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next