ಮಣಿಪಾಲ: ಈಲಿನ ಈಶ್ವರನಗರದ ಹೆದ್ದಾರಿಯ ಯೂಟರ್ನ್ ನಲ್ಲಿ ಕಾರೊಂದು ಖಾಸಗಿ ಸಿಟಿ ಬಸ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕನ ತಲೆಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಪರ್ಕಳ ಕಡೆಯಿಂದ ಉಡುಪಿಗೆ ಸಾಗುತ್ತಿದ್ದ ಸಿಟಿ ಬಸ್ ಗೆ ಅತಿವೇಗದಿಂದ ಹಿಂದಿನಿಂದ ಬಂದು ಹೊಡೆದ ಕಾರ್ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಖಾಸಗಿ ಬಸ್ ನ ಹಿಂಭಾಗವೂ ನಜ್ಜುಗುಜ್ಜಾಗಿದೆ.
ಬಸ್ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿ ಸಂಭವಿಸಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಮಣಿಪಾಲ ಪೊಲೀಸರು ತಿಳಿಸಿದ್ದಾರೆ.