Advertisement

ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌: ತಿರಂಗಾ ಸಪ್ತಾಹ

11:02 PM Aug 08, 2022 | Team Udayavani |

ಬೆಂಗಳೂರು: ಕೇಂದ್ರ ಸರಕಾರದ “ಹರ್‌ ಘರ್‌ ತಿರಂಗಾ’ ಸಪ್ತಾಹಕ್ಕೆ ಯಲಹಂಕದಲ್ಲಿರುವ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ನಲ್ಲಿ ಶನಿವಾರ ಕುಲಪತಿ ಡಾ| ವೆಂಕಟೇಶ್‌ ಚಾಲನೆ ನೀಡಿದರು.

Advertisement

ಅನಂತರ ಮಾತನಾಡಿದ ಅವರು, ನಮ್ಮ ವಿದ್ಯಾಸಂಸ್ಥೆಯು ಸಾಮಾಜಿಕ ಕಳಕಳಿಯುಳ್ಳ ಕೆಲಸಗಳಲ್ಲಿ ಸದಾ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ತುಂಬುತ್ತಿರುವ ಈ ಹೊತ್ತಿನಲ್ಲಿ ಸ್ವಾತಂತ್ರ್ಯಕ್ಕಾಗಿ ಮಣಿದ ವೀರರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಅಮೃತ ಮಹೋತ್ಸವದ ಅಂಗವಾಗಿ ಪ್ರತಿಯೊಬ್ಬರ ಮನೆ ಮೇಲೆ ರಾಷ್ಟ್ರ ಧ್ವಜ ಹಾರಾಡಿಸುವುದು ನಮ್ಮ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.

ನಮ್ಮ ವಿದ್ಯಾರ್ಥಿಗಳು ಮನೆ ಗಳಿಗೆ ಭೇಟಿ ನೀಡಿ ಧ್ವಜಗಳನ್ನು ನೀಡುತ್ತಿದ್ದು, ಕನಿಷ್ಠ ಐದು ಸಾವಿರ ಮನೆಗಳಿಗೆ ಧ್ವಜ ವಿತರಿಸುವ ಗುರಿ ಹೊಂದಲಾಗಿದೆ. ಮಣಿಪಾಲ್‌ ವಿದ್ಯಾಸಂಸ್ಥೆಯು ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ಅಡಿಯಲ್ಲಿ “ಗಂಟಿಗಾನಹಳ್ಳಿ’ಯನ್ನು ದತ್ತು ಸ್ವೀಕರಿಸಿದೆ ಎಂದು ಡಾ| ಪ್ರಜ್ಞಾ ರಾವ್‌ ತಿಳಿಸಿದರು.

ಉಪ ಕುಲಸಚಿವೆ ಡಾ| ವಿದ್ಯಾ ಶೆಟ್ಟಿ, ಉಪ ನಿರ್ದೇಶಕ ಗೌರವ್‌ ಯಾದವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next