Advertisement
ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಮಾನ್ಯತೆಯನ್ನು ಈ ಮೊದಲು ಆರು ಸಂಸ್ಥೆಗಳಿಗೆ ನೀಡಲಾಗಿತ್ತು. ಈಗ ಒಟ್ಟು 20 ಸಂಸ್ಥೆಗಳಿವೆ. ಆದರೆ ಆರೋಗ್ಯ, ಮಾನವಿಕ, ತಾಂತ್ರಿಕ, ಸಮಾಜ ವಿಜ್ಞಾನ, ನಿರ್ವಹಣೆ ಇತ್ಯಾದಿ
Related Articles
Advertisement
ಇನ್ನು 3ರಿಂದ 5 ವರ್ಷಗಳಲ್ಲಿ ವಿವಿಧ ಕ್ಯಾಂಪಸ್‌ಗಳಲ್ಲಿ ಸುಮಾರು 1,000 ಕೋ.ರೂ. ವೆಚ್ಚ ಮಾಡಲಿದೆ. ಬೆಂಗಳೂರಿನಲ್ಲಿ ಆರಂಭಿಸುವ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐದು ಕೋರ್ಸುಗಳು ಆರಂಭವಾಗ ಲಿವೆ. ಜಮ್ಶೆಡ್‌ಪುರದಲ್ಲಿ ಟಾಟಾ ಸಂಸ್ಥೆ ಜತೆ ಆರಂಭಿಸುವ ವೈದ್ಯಕೀಯ ಕಾಲೇಜಿಗೆ ಮಾಹೆ 300 ಕೋ.ರೂ. ಖರ್ಚು ಮಾಡಲಿದೆ. ಮುಂದಿನ 15 ವರ್ಷಗಳಲ್ಲಿ ಸಂಸ್ಥೆ ಮುನ್ನಡೆಯುವ ಪಥವನ್ನು ಈಗಾಗಲೇ ಗುರುತಿಸಲಾಗಿದೆ ಎಂದವರು ತಿಳಿಸಿದರು.
ಬ್ಯಾಂಕ್ ಆಫ್ ಕ್ರೆಡಿಟ್ :
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ 2021-22ರಿಂದ ಅನ್ವಯವಾಗಲಿದೆ. ಒಂದು ಕೋರ್ಸ್‌ನಲ್ಲಿ ಒಂದು ವರ್ಷ ಓದಿ ಮತ್ತೆರಡು ವರ್ಷ ಬಿಟ್ಟು ಅದೇ ಸಂಸ್ಥೆ ಅಥವಾ ಈ ಶ್ರೇಣಿಯ ಇನ್ನೊಂದು ಸಂಸ್ಥೆಗೆ ಸೇರುವುದಾದರೆ ಯಾವುದೇ ತೊಂದರೆ ಆಗುವುದಿಲ್ಲ. ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್‌ಗೆ ಮಾಹೆ ಮಾನ್ಯವಾಗಿದೆ.
40 ವಿದ್ಯಾರ್ಥಿಗಳ ಶುಲ್ಕ ಮನ್ನಾ :
ಕೊರೊನಾ ಸೋಂಕಿನಿಂದಾಗಿ ಆದಾಯಕ್ಕೆ ತೊಂದರೆಯಾಗಿದ್ದರೂ ಸಿಬಂದಿಗೆ ಪೂರ್ಣಪ್ರಮಾಣದಲ್ಲಿ ವೇತನವನ್ನು ಪಾವತಿಸಲಾಗಿದೆಯ ಲ್ಲದೇ ಈ ವರ್ಷ ಹೆಚ್ಚಿಗೆ ಪರಿಷ್ಕರಿಸಲಾಗಿದೆ. ಸೋಂಕಿನಿಂದ ಪೋಷಕ ರನ್ನು ಕಳೆದುಕೊಂಡು ಆರ್ಥಿಕವಾಗಿ ಕಂಗೆಟ್ಟ 40 ವಿದ್ಯಾರ್ಥಿಗಳ ಶುಲ್ಕವನ್ನು ಮನ್ನಾ ಮಾಡಲಾಗಿದೆ. ವಿ.ವಿ.ಯ ಶೇ. 90ರಷ್ಟು ವಿದ್ಯಾರ್ಥಿ, ಸಿಬಂದಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ ಎಂದರು.
ಸಿದ್ಧತೆಯೊಂದಿಗೆ ತರಗತಿ :
ಮಾಹೆಯು 2020ರ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಪಠ್ಯ ವಿಷಯಗಳನ್ನು ರೂಪಿಸಿ ಕೊಂಡಿದೆ. ಕೊರೊನಾದಿಂದ ಡಿಜಿಟಲ್ ತಂತ್ರಜ್ಞಾನದಿಂದ ಮುನ್ನಡೆಯುತ್ತಿದೆ. ಸಪ್ಟೆಂಬರ್‌ನಲ್ಲಿ ಭೌತಿಕ ತರಗತಿಗಳನ್ನು ಹಂತಹಂತವಾಗಿ ಆರಂಭಿಸಲಾಗುತ್ತದೆ. ನೆಗೆಟಿವ್ ಪ್ರಮಾಣ ಪತ್ರ, ಲಸಿಕೆಪಡೆದ ದಾಖಲೆ, ಮಾಸ್ಕ್ ಧಾರಣೆ, ಮೊದಲು ಒಂದು ವಾರ ಕ್ವಾರಂಟೈನ್ ಮೊದಲಾದ ಷರತ್ತುಗಳೊಂದಿಗೆ ತರಗತಿಗಳು ಆರಂಭವಾಗಲಿವೆ. ಹಿಂದಿನ ವರ್ಷಗಳ ಆರೋಗ್ಯ ವಿಜ್ಞಾನಗಳ ಕೋರ್ಸುಗಳ ತರಗತಿ ಆರಂಭವಾಗಿದ್ದು ಒಂದು ತರಗತಿಯಲ್ಲಿ ಶೇ. 30ರಷ್ಟು ವಿದ್ಯಾರ್ಥಿಗಳು ಮಾತ್ರ ಭಾಗವಹಿಸ ಬಹುದು. ಉಳಿದವರಿಗೆ ಆನ್‌ಲೈನ್ ತರಗತಿ ನಡೆಯುತ್ತವೆ.
ಕುಲಸಚಿವ ಡಾ| ನಾರಾಯಣ ಸಭಾಹಿತ್, ಸಾರ್ವಜನಿಕ ಸಂಪರ್ಕ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ನಿರ್ದೇಶಕ ಎಸ್.ಪಿ. ಕಾರ್ ಉಪಸ್ಥಿತರಿದ್ದರು.
ಮಾಹೆ ವ್ಯಾಪ್ತಿಗೆ ಟ್ಯಾಪ್ಮಿ :
ಜಾಗತಿಕ ಸ್ತರದ ನಿರ್ವಹಣ ಶಿಕ್ಷಣ ಸಂಸ್ಥೆ ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ ) ಇನ್ನು ಮುಂದೆ ಮಾಹೆ ವ್ಯಾಪ್ತಿಗೆ ಬರಲಿದೆ. ಇದರ ಕುರಿತಾದ ಪತ್ರ ವ್ಯವಹಾರ ನಡೆಯುತ್ತಿದೆ. ಟ್ಯಾಪ್ಮಿ ಮ್ಯಾನೇಜ್‌ಮೆಂಟ್ ಕೋರ್ಸ್ ನೀಡುವುದರಿಂದ ಮುಂದೆ ಮಾಹೆ ಅಧೀನದಲ್ಲಿದ್ದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ್ನು ರದ್ದುಗೊಳಿಸಲಾಗುವುದು.