Advertisement

ಮಂಗ್ಯಾನ ಕಾಟಕ್ಕೆ ಸಿಕ್ತು ಮುಕ್ತಿ

03:20 PM May 19, 2017 | Team Udayavani |

ಕಲಘಟಗಿ: ತಾಲೂಕಿನ ಕಾಮಧೇನು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಹುಚ್ಚು ಮಂಗ ಸೇರಿದಂತೆ ಸುಮಾರು 60 ಮಂಗಗಳನ್ನು ಹಿಡಿಯುವ ಮೂಲಕ ಕಾರ್ಯಾಚರಣೆ ಗುರುವಾರ ಯಶಸ್ವಿಗೊಂಡಿತು.  ಸೆರೆಹಿಡಿದ ಎಲ್ಲ ಮಂಗಗಳನ್ನು ಅರಣ್ಯಕ್ಕೆ ಸಾಗಿಸಲಾಗಿದ್ದು, ಇದರ ಖರ್ಚು ವೆಚ್ಚವನ್ನು ಗ್ರಾಪಂ ಆಡಳಿತ ಮಂಡಳಿಯೇ ಭರಿಸುವ ಭರವಸೆ ನೀಡಿದೆ.

Advertisement

 ಮೊದಲ ದಿನ (ಮೇ 18) ಕಾರ್ಯಾಚರಣೆಯಲ್ಲಿ ಸೆರೆಹಿಡಿದ 32 ಮಂಗಗಳು ಸೇರಿದಂತೆ ಒಟ್ಟು 60 ಮಂಗಗಳನ್ನು ಹಿಡಿದು ದಟ್ಟಾರಣ್ಯಕ್ಕೆ ಸಾಗಿಸಲಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಾರ್ಯಾಚರಣೆ ಸಂಪನ್ನಗೊಳ್ಳುತ್ತಿದ್ದಂತೆ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೊಳೇನವರ, ಉಪಾಧ್ಯಕ್ಷ ಮಂಜುನಾಥ ಅಲ್ಲಾಪುರ,

ಅಭಿವೃದ್ಧಿ ಅಧಿಕಾರಿ ಡಿ.ಬಿ. ಜಗದೀಶ ಅವರೊಂದಿಗೆ ಸ್ಥಳೀಯ ಸದಸ್ಯರಾದ ಏಗಪ್ಪ ಹುಲಗೂರ, ಗಿರಿಜವ್ವ ಪಾಟೀಲ, ಅಕ್ಕಮ್ಮ ಸಕ್ರಪ್ಪನವರ, ಶಂಕ್ರಪ್ಪ ದುಮ್ಮವಾಡ ಸೇರಿದಂತೆ ಗ್ರಾಮದ ಹಿರಿಯರು ಕಾರ್ಯಾಚರಣೆ ವೆಚ್ಚವನ್ನು ಗ್ರಾಪಂದಿಂದಲೇ ಭರಿಸಬೇಕು ಎಂದು ಮಾಡಿದ ಮನವಿಗೆ ಸದಸ್ಯರು ಸ್ಪಂದಿಸಿದ್ದಾರೆ. 

ಮಹಾರಾಷ್ಟ್ರದ ಮೀರಜ್‌ನಲ್ಲಿರುವ ಶಬ್ಬೀರ ಹನೀಫ್‌ ಶೇಖ ನೇತೃತ್ವದ ಮಂಗಗಳನ್ನು ಹಿಡಿಯುವ ಮೂವರು ಜನರ ತಂಡವು ಕಾರ್ಯಾಚರಣೆ ನಡೆಸಿತು. ವಲಯ ಅರಣ್ಯಾಧಿಧಿಕಾರಿ ಕೆ.ಆರ್‌. ಕುಲಕರ್ಣಿ, ಅರಣ್ಯ ರಕ್ಷಕ ಕಾಶಿನಾಥ ಕುಂಬಾರ, ಕುಮಾರ ಹಡಪದ, ಬಸವರಾಜ ಚವರಗಿ, ರಾಯಪ್ಪ, ನಾಗಪ್ಪ ಸೇರಿದಂತೆ ಗ್ರಾಮದ ಯುವಕರು ಮಂಗಗಳನ್ನು ಸಾಗಿಸಲು ಸಹಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next