Advertisement

ಮಣಿಕಂಠ ಯಕ್ಷಕಲಾ ಕೇಂದ್ರ:  7ನೇ ವಾರ್ಷಿಕೋತ್ಸವ ಸಂಭ್ರಮ

02:21 PM Mar 17, 2019 | Team Udayavani |

ಮುಂಬಯಿ: ಶ್ರೀ ಮಣಿಕಂಠ ಯಕ್ಷಕಲಾ ಕೇಂದ್ರ ಮುಂಬಯಿ ಇದರ ಏಳನೇ ವಾರ್ಷಿಕೋತ್ಸವ ಸಂಭ್ರಮವು ಇತ್ತೀಚೆಗೆ ವಿಕ್ರೋಲಿ ಪೂರ್ವ ಕನ್ನಮ್‌ವಾರ್‌ ನಗರದ ಕಾಮಾYರ್‌ ಕಲ್ಯಾಣ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವ ಹಿಂದು ಪರಿಷತ್‌ ಥಾಣೆ ಇದರ ಅಧ್ಯಕ್ಷ ಪೊಲ್ಯ ಉಮೇಶ್‌ ಶೆಟ್ಟಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸನ್‌ಸಿಟಿ ಹೊಟೇಲ್‌ ಅಂಧೇರಿ ಇದರ ಮಾಲಕ ಶಾಂತಾರಾಮ ಶೆಟ್ಟಿ, ರವಿರಾ ಪೊಲಿಪ್ಲಾಸ್ಟ್‌ ಕಂಪೆನಿಯ ಮಾಲಕ ರತ್ನಾಕರ ಶೆಟ್ಟಿ, ಬಂಟರ ಸಂಘ ಮುಂಬಯಿ ಮಾಜಿ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ, ಕನಕ ಫುಡ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ನಿರ್ದೇಶಕ ಜಗದೀಶ್‌ ಶೆಟ್ಟಿ, ಕರ್ನಾಟಕ ಸಂಘ ಅಂಧೇರಿಯ ಸ್ಥಾಪಕ ಸದಸ್ಯ ಕೃಷ್ಣ ಬಿ. ಶೆಟ್ಟಿ, ನವಿಮುಂಬಯಿ ಹೊಟೇಲ್‌ ಓನರ್ ಅಸೋಸಿಯೇಶನ್‌ ಅಧ್ಯಕ್ಷ ದಯಾನಂದ ಶೆಟ್ಟಿ, ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಂಸುಂದರ್‌ ಶೆಟ್ಟಿ, ಭಾರತ್‌ ಕೋಚ್‌ ಬಿಲ್ಡರ್ನ ಕಾರ್ಯಾಧ್ಯಕ್ಷ ಸದಾಶಿವ ಶೆಟ್ಟಿ, ಯಕ್ಷಗಾನ ಅರ್ಥದಾರಿ ಕೆ. ಕೆ. ಶೆಟ್ಟಿ ಹಾಗೂ ಸಂಘದ ಗೌರವಾಧ್ಯಕ್ಷ ಮರಾಠಾ ಸುರೇಶ್‌ ಶೆಟ್ಟಿ ಅವರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಯಕ್ಷಗುರು, ಭಾಗವತ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರು ಸ್ವಾಗತಿಸಿ, ಅತಿಥಿಗಳನ್ನು  ಗೌರವಿಸಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಗಣ್ಯರು ಸಂದಭೋìಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಊರಿನ ಹಿರಿಯ, ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. 

ಸಮಾರಂಭದಲ್ಲಿ ಭಾಗವತ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರ ಯಕ್ಷಗಾನದ ಆಯ್ದ ಹಾಡುಗಳ ಬಡಗುಶೈಲಿಯ ಧ್ವನಿ ಸುರುಳಿಯನ್ನು ಪ್ರಾಯೋಜಕರಾದ ಶಾಂತಾರಾಮ ಶೆಟ್ಟಿ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಸಮ್ಮಾನಿತ ಸುಬ್ರಹ್ಮಣ್ಯ ಧಾರೇಶ್ವರ ಅವರ ಅಭಿನಂದನಾ ಭಾಷಣವನ್ನು ಗೋರೆಗಾಂವ್‌ ಕರ್ನಾಟಕ ಸಂಘದ ವಿಶ್ವಸ್ತ ಜಿ. ಟಿ. ಆಚಾರ್ಯ ಮಾಡಿದರು. ಗೋರೆಗಾಂವ್‌ ಕರ್ನಾಟಕ ಸಂಘದ ವಿಶ್ವಸ್ತ ಸುರೇಂದ್ರ ಸಾಲ್ಯಾನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜಗಜೀವನ್‌ ಪೂಜಾರಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಮತ್ತು ಊರಿನ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಳ-ದಮಯಂತಿ ಯಕ್ಷಗಾನ ಬಯಲಾಟ ನಡೆಯಿತು. ಹಿಮ್ಮೇಳದಲ್ಲಿ ಭಾಗವತ ರಾಗಿ ಸುಬ್ರಹ್ಮಣ್ಯ ಧಾರೇಶ್ವರ, ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಉಡುಪಿ, ಚೆಂಡೆಯಲ್ಲಿ ಕೃಷ್ಣಾನಂದ ನಾಯಕ್‌ ಭಾಗವಹಿಸಿದರು.

Advertisement

ಮುಮ್ಮೇಳದಲ್ಲಿ ಯಕ್ಷಗುರು, ಭಾಗವತ ದೇವಲ್ಕುಂದ ಭಾಸ್ಕರ ಶೆಟ್ಟಿ, ಸತೀಶ್‌ ಪ್ರಭು, ವಿಘ್ನೇಶ್‌ ಭಟ್‌, ಗಣಪತಿ ಭಟ್‌, ಕಡ್ತಲ ಕೃಷ್ಣ ನಾಯಕ್‌, ಶಶಿಧರ ಹೆಗ್ಡೆ, ಗಿರೀಶ್‌ ಗೌಡ, ಸುಧಾಕರ ಶೆಟ್ಟಿ, ಮೊದಲಾದವರು ಭಾಗವಹಿಸಿದರು. ದೇವಲ್ಕುಂದ ಭಾಸ್ಕರ ಶೆಟ್ಟಿ ಇವರ ನಿರ್ದೇಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next