Advertisement
ಜ. 20ರಿಂದ 25ರ ವರೆಗೆ ಮಾಣಿ ಶ್ರೀ ಉಳ್ಳಾಲ್ತಿ ಮಾಡದಲ್ಲಿ ವೇ|ಮೂ| ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವ, ಕೂಡುಕಟ್ಟಿನ ಯಜಮಾನತ್ವದಲ್ಲಿ ದೈವಗಳ ಧರ್ಮಚಾವಡಿಯಲ್ಲಿ ಪುನಃ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ಫೆ. 5ರಂದು ಭಂಡಾರಯೇರಿ ಫೆ. 6ರಂದು ಕಾಲಾವಧಿ ಮೆಚ್ಚಿ ಜಾತ್ರೆ ನಡೆಯಲಿದೆ.
Related Articles
ತುಳುನಾಡಿನ ಪುಣ್ಯಭೂಮಿ ಯಾದ ಸುಳ್ಳಮಲೆ, ಬಳ್ಳಮಲೆ ಬೆಟ್ಟದ ತೀರ್ಥಸ್ನಾನ ಬಹಳ ಪ್ರಸಿದ್ಧಿ ಪಡೆದಿದೆ. ಇದೇ ಸುಳ್ಳಮಲೆ ಬೆಟ್ಟದ ತಪ್ಪಲಿನಲ್ಲಿ ಕಂಬಳ ಮತ್ತು ಬಾಕಿಮಾರು ಗದ್ದೆಗಳ ಪ್ರಾಕೃತಿಕ ಪರಿಸರದಲ್ಲಿ ಧರ್ಮ ಚಾವಡಿ ಕಂಗೊಳಿಸುತ್ತದೆ. ಈ ಧರ್ಮ ಚಾವಡಿಗೆ ಅನೇಕ ವರ್ಷಗಳ ಇತಿಹಾಸವಿದ್ದು ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ನೆಲೆಯಾಗಿದೆ.
Advertisement
ಚಾವಡಿ ಜೀರ್ಣಾವಸ್ಥೆ ಯಲ್ಲಿರುವುದನ್ನು ಮನಗಂಡು 20 ವರ್ಷಗಳ ಹಿಂದೆ ಹಳೆಯದನ್ನು ಕೆಡವಿ ನೂತನ ಚಾವಡಿ ನಿರ್ಮಿಸಿ, ಬ್ರಹ್ಮಕಲಶ ನಡೆಸಲಾಗಿತ್ತು. ಮತ್ತೆ ನಡೆದ ಪ್ರಶ್ನೆ ಚಿಂತನೆಯಲ್ಲಿ ದೈವಗಳ ನುಡಿಯ ಪ್ರಕಾರ ಗತಕಾಲದ ವೈಭವದಂತೆ ಚಾವಡಿಯನ್ನು ಮರು ನಿರ್ಮಾಣ ಮಾಡಬೇಕು ಎನ್ನುವ ಸಂಕಲ್ಪದಂತೆ ವೇ|ಮೂ| ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಅನುಜ್ಞಾ ಕಲಶ, ಭೂಮಿ ಪೂಜೆ, ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿತ್ತು. ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ನಿರ್ದೇಶನದಂತೆ ಭಕ್ತರ ಧನಸಹಾಯ ಮತ್ತು ಶ್ರಮ ಸೇವೆಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಇದೀಗ ಧರ್ಮ ಚಾವಡಿ ಎದ್ದು ನಿಂತಿದೆ.