ವಿಟ್ಲ : ಸರಕಾರ ಜನರಿಗಾಗಿ ಯೋಜನೆಗಳನ್ನು ತಂದು ಪರಿಸರ ಜಾಗೃತಿ ಮೂಡಿಸುತ್ತಿದ್ದು ಪರಿಸರ ಉಳಿಸುವ ಪಣ ತೊಡೋಣ ಎಂದು ಬಂಟ್ವಾಳ ಅರಣ್ಯ ಸಂರಕ್ಷಣ ಅಧಿಕಾರಿ ಸುರೇಶ್ ಬಿ. ಹೇಳಿದರು.
ಅವರು ಮಾಣಿ ಕರ್ನಾಟಕ ವಿದ್ಯಾ ಸಂಸ್ಥೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.
ಶಾಲೆಯ ಆವರಣದಲ್ಲಿ ಉತ್ತಮ ಜಾತಿಯ ಗಿಡ ನೆಟ್ಟು, ವಿದ್ಯಾರ್ಥಿಗಳಿಗೂ ನೀಡಿ, ಕೋಟಿ ವೃಕ್ಷ ಆಂದೋಲನ, ಇಲಾಖಾ ಮಾಹಿತಿ ಮತ್ತು ಉರಗ ತಜ್ಞ ಕಿರಣ್ ಪಿಂಟೋ ಅವರಿಂದ ಪ್ರಾತ್ಯಕ್ಷಿಕೆ ಇತ್ಯಾದಿ ಕಾರ್ಯಕ್ರಮ ನಡೆಸಲಾಯಿತು.
ಆಡಳಿತ ಮಂಡಳಿ ಕಾರ್ಯದರ್ಶಿ ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಹಬೀಬ್ ಮಾಣಿ, ಉಪ-ಅರಣ್ಯ ಸಂರಕ್ಷಣಾಧಿಕಾರಿ ಪ್ರೀತಂ, ವಿದ್ಯಾರ್ಥಿ ನಾಯಕ ಅಬ್ದುಲ್ ರಹಿಮಾನ್, ಅರಣ್ಯ ಸಿಬಂದಿ ಜಿತೇಶ್ ಪಿ., ದೇಜಪ್ಪ, ಚಿದಾನಂದ, ಭಾಸ್ಕರ, ಪ್ರವೀಣ ಇತರರು ಉಪಸ್ಥಿತರಿದ್ದರು. ವಿನಯ್ ಕುಮಾರ್ ಪ್ರತಿಜ್ಞೆ ಬೋಧಿಸಿದರು.
ಪ್ರಾಂಶುಪಾಲ ರವೀಂದ್ರ ಶೆಟ್ಟಿ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಬಿ.ಕೆ. ಭಂಡಾರಿ ವಂದಿಸಿದರು. ಹಿಂದಿ ಶಿಕ್ಷಕ ಜಯರಾಮ ಕೆ. ಕಾರ್ಯಕ್ರಮ ನಿರೂಪಿಸಿದರು.