ಚನ್ನರಾಯಪಟ್ಟಣ: ಪಟ್ಟಣದ ಹೊರವಲಯಲ್ಲಿರುವ ಜ್ಞಾನ ಸಾಗರ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಹಲಸು-ಮಾವು ತಿನಿಸಿನ ಮೇಳೆ ಆಯೋಜನೆ ಗೊಂಡಿದ್ದು ಸುಮಾರು 50 ಬಗೆಯ ವಿವಿಧ ತಿನಿಸುಗಳನ್ನು ತಯಾರಿಸಿದರು.
ಮುಂಗಾರಿನಲ್ಲಿ ಮಾವು ಹಾಗೂ ಹಲಸಿದ ಹಣ್ಣುಗಳು ಹೇರಳವಾಗಿ ದೊರೆಯುವುದರಿಂದ ವಿದ್ಯಾರ್ಥಿಗಳಿಗೆ ಈ ಹಣ್ಣುಗಳಿಂದ ತಯಾರು ಮಾಡುವ ವಿವಿಧ ಖಾದ್ಯಗಳನ್ನು ಪರಿಚಯಿಸುವ ದೃಷ್ಟಿಯಿಂದ ಶಿಕ್ಷಣ ಸಂಸ್ಥೆ ಮೇಳವನ್ನು ಆಯೋಜಿಸಿದ್ದರು. ವಿದ್ಯಾರ್ಥಿಗಳೇ ಹಲವು ಬಗೆಯ ತಿನಿಸುಗಳನ್ನು ತಯಾರಿಸಿದ್ದರು. ಇದಕ್ಕೆ ಪೋಷಕರೂ ಸಹಕಾರ ನೀಡಿದ್ದರು. ತಮ್ಮ ಮಕ್ಕಳಿಗೆ ಸಹಕಾರ ನೀಡಲು ಪಾಲಕರೂ ಸಹ ಅನೇಕ ತಿನಿಸುಗಳನ್ನು ತಯಾರು ಮಾಡಿಕೊಟ್ಟಿದ್ದರು.
ಗಮನ ಸೆಳೆದ ಮಾವಿನ ಖಾದ್ಯಗಳು: ಮಾವಿನ ಚಿತ್ರನ್ನ, ಮಾವಿನ ಹಣ್ಣಿನ ಜ್ಯೂಸ್, ಉಪ್ಪಿನಕಾಯಿ, ಮ್ಯಾಂಗೋಮಸ್ತಾನಿ, ಮ್ಯಾಂಗೋ ಮಿಲ್ಕ್ಶೇಕ್ ಮ್ಯಾಂಗೋ ಪ್ಯೂರಿ, ಮ್ಯಾಂಗೋ ಹಲ್ವಾ, ಮಾವಿನ ಹಣ್ಣಿನ ಕೇಸರಿಬಾತ್, ಮ್ಯಾಂಗೋ ಪೇಡಾ, ಮ್ಯಾಂಗೋ ಜಾಮ್, ಮಾವಿನ ಹಣ್ಣಿನ ರಸಾಯನ, ಹಲಸಿನ ಹಾಗೂ ನೇರಳೆ ಹಣ್ಣಿನಿಂದ ಅನೇಕ ಬಗೆಯ ಜ್ಯೂಸ್‌ಗಳನ್ನು ತಯಾರಿಸಿ ಶಾಲಾ ಶಿಕ್ಷಕರಿಗೆ ನೀಡಿಲ್ಲದೇ ಕಾರ್ಯಕ್ರಮದ ಗಣ್ಯರಿಗೂ ಸವಿಯಲು ವಿದ್ಯಾರ್ಥಿಗಳು ನೀಡಿದರು.
80 ವಿದ್ಯಾರ್ಥಿಗಳು ಭಾಗಿ: 4ರಿಂದ 10ನೇ ತರಗತಿಯವರೆಗೆ ಸುಮಾರು 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಪ್ರತಿ ಶಾಲೆಯ ಪ್ರತಿ ವಿಭಾಗಕ್ಕೆ ನಾಲ್ಕು ಮಂದಿಯ ಒಂದು ತಂಡ ರಚನೆ ಮಾಡಿದ್ದರಿಂದ ಒಂದು ತಂಡದಲ್ಲಿ ಕನಿಷ್ಠ 15 ಬಗೆಯ ತಿನಿಸನ್ನು ತಯಾರಿಸಿದ್ದರು. 8ನೇ ತರಗತಿ ಹರ್ಷಿತಾ ಹಾಗೂ ರಿಷಾ ಉದಯವಾಣಿಯೊಂದಿಗೆ ಮಾತನಾಡಿ, ಮಾವಿನ ಮೇಳದಿಂದ ನಮಗೆ ಹೊಸ ಅನುಭವ ದೊರೆಯುತ್ತಿರುವುದಲ್ಲದೇ ಅಂತರ್ಜಾಲದ ಮೂಲಕ ಮಾವಿನ ತಿನಿಸು ತಯಾರಿಸುವುದನ್ನು ನೋಡಿ ನಾವೇ ತಯಾರು ಮಾಡಿದ್ದೇವೆ, ಹಣ್ಣಿನ ತಿನಿಸುಗಳಿಂದ ನಮಗೆ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹ ಕಾರಿಯಾಗಿವೆ ಎಂದು ಹೇಳಿದರು.ನಾಗೇಶ್ ಎಜು ಕೇಷನ್ ಟ್ರಸ್ಟಿನ ಕಾರ್ಯದರ್ಶಿ ಡಾ.ಭಾರತಿ ಸುದ್ದಿ ಗಾರರೊಂದಿಗೆ ಮಾತನಾಡಿ ಮಕ್ಕಳಲ್ಲಿನ ಕ್ರಿಯಾ ಶೀಲವನ್ನು ಬೆಳೆಸಲು ಈ ಕಾರ್ಯಕ್ರಮವನ್ನು ಆಯೋ ಜಿಸಲಾಗಿದೆ. ಮಾವು ಹಾಗೂ ಹಲಸಿದ ಖಾದ್ಯ ಗಳನ್ನು ರುಚಿಯಾಗಿ ತಯಾರು ಮಾಡಿ ಉತ್ತಮ ವಾಗಿ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು ಎಂದರು. ಮಕ್ಕಳ ಸಾಹಿತ್ಯ ಪರಿ ಷತ್ತಿನ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್, ಪದಾಧಿ ಕಾರಿಗಳಾದ ನೀಲಾ, ಅಭಿ, ಶಿಕ್ಷಣ ಸಂಸ್ಥೆ ಡೀನ್ ಡಾ. ಸುಜಾಫಿಲಿಪ್ ಮುಂತಾದವರು ಉಪಸ್ಥಿತರಿದ್ದರು.