Advertisement
1.ಮಾವಿನಕಾಯಿ ಗೊಜ್ಜು ಬೇಕಾಗುವ ಸಾಮಗ್ರಿ: ಸಿಪ್ಪೆ, ಓಟೆ ತೆಗೆದ ಮಾವಿನಕಾಯಿ, ಅಚ್ಚ ಖಾರದ ಪುಡಿ, ಅರಿಶಿನ, ಚಿಟಿಕೆ ಇಂಗು, ಒಂದು ಚಮಚ ಹೆರೆದ ಬೆಲ್ಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಮಾವಿನಕಾಯಿ, ಹೆಸರುಬೇಳೆ- ಕಾಲು ಕಪ್, ತೊಗರಿಬೇಳೆ- ಕಾಲು ಕಪ್, ಸಣ್ಣಗೆ ಹೆಚ್ಚಿದ ಟೊಮೇಟೊ-ಕಾಲು ಕಪ್, ಹಸಿ ಮೆಣಸು- 4, ಅರಿಶಿನಪುಡಿ, ಚಿಟಿಕಿ ಇಂಗು, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು.
Related Articles
Advertisement
3.ಮಾವು-ಸಿಹಿಕುಂಬಳ ಹಸಿಕೂಟು ಬೇಕಾಗುವ ಸಾಮಗ್ರಿ: ಮಾವಿನ ಹೋಳು- 1 ಕಪ್, ಸಿಹಿ ಕುಂಬಳಕಾಯಿ ಹೋಳು- 1 ಕಪ್, ಹೆಸರು ಕಾಳು- 1 ಕಪ್, ತೆಂಗಿನ ತುರಿ- ಕಪ್, ಕಾಳುಮೆಣಸು- 1/2 ಚಮಚ, ಜೀರಿಗೆ- 1ಚಮಚ, ಉಪ್ಪು. ಮಾಡುವ ವಿಧಾನ: ಕುಕ್ಕರ್‌ನಲ್ಲಿ ಮಾವು, ಕುಂಬಳಕಾಯಿ, ಹೆಸರುಕಾಳು ಹಾಕಿ, ಐದು ಲೋಟ ನೀರು ಹಾಕಿ ಬೇಯಿಸಿ. ತೆಂಗಿನತುರಿ ಯೊಂದಿಗೆ ಮೆಣಸು, ಜೀರಿಗೆ ಸೇರಿಸಿ ರುಬ್ಬಿ. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಬೆಂದ ಪದಾರ್ಥಕ್ಕೆ ಅರೆದ ಹಸಿಖಾರವನ್ನು ಸೇರಿಸಿ ಮಧ್ಯ ಉರಿಯಲ್ಲಿ ಹತ್ತು ನಿಮಿಷ ಕುದಿಸಿ, ಉರಿ ನಂದಿಸಿ. ನಂತರ ಅದಕ್ಕೆ ಕೊತ್ತಬರಿಸೊಪ್ಪು ಹಾಕಿ. 4. ಮಾವಿನಕಾಯಿ ಚಟ್ನಿ
ಬೇಕಾಗುವ ಸಾಮಗ್ರಿ : ತುರಿದ ಮಾವಿನಕಾಯಿ- ಕಾಲು ಕಪ್, ಕಡಲೆಬೇಳೆ- ಅರ್ಧ ಕಪ್, ಒಣಮೆಣಸು- 8, ಉಪ್ಪು. ಮಾಡುವ ವಿಧಾನ: ಬಾಣಲಿಗೆ ಎಣ್ಣೆ ಹಾಕದೆ, ಕಡಲೆಬೇಳೆ, ಒಣಮೆಣಸು ಹಾಕಿ ಕೆಂಬಣ್ಣ ಬರುವವರೆಗೆ ಹುರಿದುಕೊಂಡು ಒಂದು ತಟ್ಟೆಯಲ್ಲಿ ಆರಲು ಬಿಡಿ. ಅದೇ ಬಾಣಲೆಯ ಬಿಸಿಯಲ್ಲೇ ತುರಿದ ಮಾವಿನಕಾಯಿ ಹಾಕಿ ಬಾಡಿಸಿ, ಬೇಳೆಯ ಮಿಶ್ರಣಕ್ಕೆ ಸೇರಿಸಿ. ತಣಿದ ನಂತರ ರುಚಿಗೆ ತಕ್ಕಷ್ಟು ಕಲ್ಲುಪ್ಪು ಹಾಕಿ ಅರೆದರೆ ಮಾವಿನ ಕಾಯಿ ಚಟ್ನಿ ರೆಡಿ. ಇದಕ್ಕೆ ಸಾಸಿವೆ-ಇಂಗಿನ ಒಗ್ಗರಣೆ ಕೊಟ್ಟರೆ ರುಚಿ ಹೆಚ್ಚುತ್ತದೆ. 5. ದಿಢೀರ್ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ತೋತಾಪುರಿ ಮಾವಿನಕಾಯಿ- 1 ಕಪ್, ಎರಡು ಚಮಚ ಅಚ್ಚ ಖಾರದ ಪುಡಿ, ಪುಡಿ ಉಪ್ಪು, ಸಾಸಿವೆ, ಎಣ್ಣೆ, ಇಂಗು. ಮಾಡುವ ವಿಧಾನ: ಸಣ್ಣಗೆ ಹೆಚ್ಚಿದ ಮಾವಿನಕಾಯಿಯನ್ನು ಪಿಂಗಾಣಿ ಪಾತ್ರೆಗೆ ಹಾಕಿಡಿ. ಇದಕ್ಕೆ ಖಾರದ ಪುಡಿ, ಉಪ್ಪು ಹಾಕಿ. ನಂತರ ಒಂದು ಸೌಟು ಅಡುಗೆ ಎಣ್ಣೆ ಬಿಸಿ ಮಾಡಿ ಸಾಸಿವೆ ಸಿಡಿಸಿ, ಒಂದು ಚಮಚ ಇಂಗು ಸೇರಿಸಿ, ಈ ಒಗ್ಗರಣೆಯನ್ನು ಖಾರದ ಪುಡಿಯ ಮೇಲೆ ಹಾಕಿ, ತೇವಾಂಶವಿರದ ಚಮಚದಿಂದ ಉಪ್ಪು, ಖಾರ, ಮಾವಿನ ಹೋಳುಗಳು ಚೆನ್ನಾಗಿ ಹೊಂದಿಕೊಳ್ಳುವಂತೆ ಕಲೆಸಿ, ಅರ್ಧ ಗಂಟೆ ಮುಚ್ಚಿಟ್ಟು ಬಿಡಿ. ಉಪ್ಪಿನಕಾಯಿ ವಾರಗಳ ಕಾಲ ಉಳಿಯುತ್ತದೆ. -ಕೆ.ವಿ.ರಾಜಲಕ್ಷ್ಮೀ, ಬೆಂಗಳೂರು