Advertisement

ಮಧುಮೇಹ ನಿಯಂತ್ರಣಕ್ಕೆ ಮಾವಿನ ಎಲೆ ಉಪಕಾರಿ

05:21 PM Jun 18, 2022 | Team Udayavani |

ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವು ಕೇವಲ ಹಣ್ಣಿನ ರುಚಿ ಮಾತ್ರವಲ್ಲದೆ ಇದರಲ್ಲಿ ಹಲವು ಔಷಧ ಗುಣಗಳಿಗೆ ಖ್ಯಾತಿ ಪಡೆದಿದೆ. ಮಾವಿನ ಹಣ್ಣಿನಲ್ಲಿ ಸಿಗುವ ವಿಟಮಿನ್‌ “ಸಿ’ ಅಂಶ ದೇಹಕ್ಕೆ ರೋಗನಿರೋಧಕ ಶಕ್ತಿ ಒದಗಿಸುತ್ತದೆ. ಬರೀ ಮಾವಿನ ಹಣ್ಣು ಮಾತ್ರವಲ್ಲದೆ ಇದರ ಎಲೆಗಳು ಕೂಡ ಅನೇಕ ಔಷಧ ಗುಣಗಳನ್ನು ಹೊಂದಿವೆ. ಇದಲ್ಲಿರುವ ಔಷಧೀಯ ಅಂಶಗಳು ಮಧುಮೇಹದಂತಹ ಅನೇಕ ರೋಗಗಳ ನಿವಾರಣೆಗೆ ಉಪಯುಕ್ತವಾಗಿವೆ. ಅಂತಹ ಕೆಲವು ವಿವರಗಳು ಕೆಳಗಿನಂತಿವೆ.

Advertisement

ಮಧುಮೇಹ ನಿಯಂತ್ರಣ
ಮಾವಿನ ಎಲೆಗಳು ಮಧುಮೇಹಿಗಳಿಗೆ ಉತ್ತಮವಾದ ಔಷಧ. ಇದರ ಎಲೆಗಳಲ್ಲಿರುವ ಪೋಷಕಾಂಶಗಳು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಿಸುವ ಸಾಮರ್ಥ್ಯ ಹೊಂದಿದೆ. 3ರಿಂದ 4 ಮಾವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಅನಂತರ ಸುಮಾರು 24 ಗಂಟೆಗಳ ಕಾಲ ಹಾಗೆಯೇ ಬಿಟ್ಟು. ಮರುದಿನ ಬೆಳಗ್ಗೆ ಆ ಬೇಯಿಸಿದ ನೀರನ್ನು ಫಿಲ್ಟರ್‌ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ತರಬಹುದು.

ಅಸ್ತಮಾಕ್ಕೆ ಚಿಕಿತ್ಸೆ
ಅಸ್ತಮಾ ರೋಗ ನಿಯಂತ್ರಣಕ್ಕೆ ಮಾವಿನ ಎಲೆಗಳು ಔಷಧಯಾಗಿವೆ. ನೀರಿನಲ್ಲಿ ಮಾವಿನ ಎಲೆಯನ್ನು ಕುದಿಸಿ ಕುಡಿಯುವುದರಿಂದ ಅಸ್ತಮಾವನ್ನು ನಿಯಂತ್ರಣದಲ್ಲಿಡಬಹುದು.

ಸೋಂಕಿನಿಂದ ರಕ್ಷಣೆ
ಮಾವಿನ ಎಲೆಗಳಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಮತ್ತು ಔಷಧ ಗುಣಗಳು ಹಲವು ರೀತಿಯ ಬ್ಯಾಕ್ಟೀರಿಯಾಗಳ ಸೋಂಕಿನಿಂದ ದೇಹವನ್ನು ರಕ್ಷಿಸುತ್ತವೆ. ವಿಶೇಷವಾಗಿ ಜೀರ್ಣ ಕ್ರಿಯೆಯಲ್ಲಿ ತೊಂದರೆ ಮತ್ತು ಗಡ್ಡೆಗಳಾಗದಂತೆ ನೋಡಿಕೊಳ್ಳುತ್ತದೆ.

ರಕ್ತದೊತ್ತಡಕ್ಕೆ ಪರಿಣಾಮಕಾರಿ ಔಷಧ
ಈಗಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗಿ ಕಾಣಸಿಗುವ ರೋಗಗಳಲ್ಲಿ ಒಂದಾಗಿದೆ. ಉಪ್ಪು ಸೇವನೆಯಲ್ಲಿ ಜಾಗರೂಕತೆ ಮಾಡುವುದರಿಂದ ಇದನ್ನು ಹತೋಟಿಯಲ್ಲಿಡಬಹುದು. ಇದಲ್ಲದೆ ಮಾವಿನ ಎಲೆ ಚಹಾ ಸೇವನೆ ರಕ್ತದೊತ್ತಡ ನಿಯಂತ್ರಣಕ್ಕೆ ಔಷಧವಾಗಿದೆ.

Advertisement

ವೈರಸ್‌ಗಳ ಸೋಂಕಿನಿಂದ ರಕ್ಷಣೆ
ಮಾವಿನ ಎಲೆಗಳನ್ನು ಕೊಳೆಸಿ ದಾಗ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಹೆಚ್ಚಾ ಗುತ್ತವೆ. ಈ ದ್ರವ ಒಂದು ಉತ್ತಮ ಸೌಂದರ್ಯವರ್ಧಕವೂ ಹೌದು. ವೈರಸಿನ ಸೋಂಕು ಇರುವಲ್ಲಿ ಈ ದ್ರವವನ್ನು ಬಳಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಈ ಸೋಂಕನ್ನು ಎದುರಿಸಲು ಹೆಚ್ಚು ಸಬಲಗೊಂಡಿರುವುದು ಸಂಶೋಧನೆಗಳಲ್ಲಿ ಕಂಡುಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next