Advertisement

ನಂದಿನಿ ಪಾರ್ಲರ್‌ಗಳಲ್ಲಿ  ಮಾವು ಮಾರಾಟ

06:01 PM Jun 02, 2021 | Team Udayavani |

ಚಿಕ್ಕಬಳ್ಳಾಪುರ: ಮಾವು ಬೆಳೆಗಾರರಿಗೆಶೇ.50 ರಿಯಾಯ್ತಿ ದರದಲ್ಲಿ ಪ್ಲಾಸ್ಟಿಕ್‌ಕ್ರೇಟ್ಸ್‌, ಬಾಕ್ಸ್‌ ಒದಗಿಸುತ್ತಿದ್ದು, ನಂದಿನಿಪಾರ್ಲರ್‌ಗಳಲ್ಲಿ ಮಾವು ಮಾರಾಟಕ್ಕೆಅವಕಾಶ ಮಾಡಿಕೊಡಲಾಗುವುದುರಾಜ್ಯ ಮಾವು ಅಭಿವೃದ್ಧಿ ನಿಗಮದಅಧ್ಯಕ್ಷಕೆ.ವಿ.ನಾಗರಾಜ್‌ ಹೇಳಿದರು.
ನಗರದಲ್ಲಿ ಅಶಕ್ತ ಕುಟುಂಬಗಳಿಗೆಧರ್ಮಸ್ಥಳ ಸಂಸ್ಥೆಯಿಂದ ದಿನಸಿ ಕಿಟ್‌ವಿತರಿಸಿ ಮಾತನಾಡಿ, ಮಾವು ಬೆಳೆಗಾರರಿಗೆ ಮಾರುಕಟ್ಟೆ ಒದಗಿಸಲು ಪ್ರಯತ್ನಮಾಡುವುದಾಗಿ ತಿಳಿಸಿದರು.

Advertisement

ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕಪ್ರಶಾಂತ್‌ ಮಾತನಾಡಿ, ಬಡ ಸೋಂಕಿತರಿಗಾಗಿ ಸಂಸ್ಥೆಯಿಂದ ತಾಲೂಕಿಗೆ ಒಂದರಂತೆ ಉಚಿತ ವಾಹನ ವ್ಯವಸ್ಥೆ ಮಾಡಿದ್ದು, ಜಿಲ್ಲೆಯಲ್ಲಿ 900 ಮಂದಿ ಇದರ ಪ್ರಯೋಜನಪಡೆದಿದ್ದಾರೆ. ಚಿಂತಾಮಣಿ ತಾಲೂಕಿನಲ್ಲಿ21 ದಿನಗಳಿಂದ ಮಧ್ಯಾಹ್ನ ಮತ್ತು ರಾತ್ರಿ65 ಅಶಕ್ತರಿಗೆ ಊಟದ ವ್ಯವಸ್ಥೆಮಾಡಲಾಗಿದೆ ಎಂದು ಹೇಳಿದರು.5 ದಿನಗಳ ಹಿಂದೆ ಶಿಡ್ಲಘಟ್ಟ ತಾಲೂಕಿನಲ್ಲಿ 3ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಫ್ರೂಟ್‌ ಕಿಟ್‌ ವಿತರಣೆ ಮಾಡಲಾಗಿದೆ.

ಸದ್ಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 150ಅಶಕ್ತಕುಟುಂಬಕ್ಕೆ ದಿನಕಿಟ್‌ ವಿತರಿಸಲಾಗುತ್ತಿದ್ದು. ರಾಜ್ಯದ ಆಯ್ದ ಆಸ್ಪತ್ರೆಗಳಿಗೆ300 ಆಕ್ಸಿಜನ್‌ ಸಾಂದ್ರಕ, 20 ವೆಂಟಿಲೇಟರ್‌ ಒದಗಿಸಲಾಗಿದೆ. ಜಿಲ್ಲಾಸ್ಪತ್ರೆಗಳಿಗೆ3 ರಿಂದ 5 ಟನ್‌ ಲಿಕ್ವಿಡ್‌ ಆಕ್ಸಿಜನ್‌ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಯೋಜನಾಧಿಕಾರಿ ಧನಂಜಯ್‌,ಮೇಲ್ವಿಚಾರಕ ಶ್ರೀನಿವಾಸ್‌ ಗಂಗಾಧರ್‌,ಒಕ್ಕೂಟದ ಅಧ್ಯಕ್ಷೆ ಪದ್ಮಾ, ಸೇವಾಪ್ರತಿನಿಧಿಗಳಾದ ಸುಜಾತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next