Advertisement

ನಾಲ್ಕು ದಿನಗಳ ಮಾವು ಮೇಳಕ್ಕೆ ಉತ್ತಮ ಸ್ಪಂದನೆ

04:38 PM May 31, 2022 | Team Udayavani |

ಮೈಸೂರು: ನಗರದಲ್ಲಿ ನಾಲ್ಕು ದಿನಗಳ ಕಾಲ ಆಯೋಜನೆಗೊಂಡ ಮಾವುಮೇಳಕ್ಕೆ ಮಾವು ಪ್ರಿಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬರೋಬ್ಬರಿ 74ಟನ್‌ ಮಾವು ಮಾರಾಟವಾಗಿದೆ.

Advertisement

ಸಾವಯವ ಪದ್ಧತಿ ಮೂಲಕ ಮಾವು ಬೆಳೆಯುವ ಬೆಳೆಗಾರರಿಗೆ ಮಾರುಕಟ್ಟೆ ಒದಗಿಸುವ ಹಾಗೂ ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಮಾವು ಲಭ್ಯವಾಗುವಂತೆಮಾಡುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ, ಮಾರುಕಟ್ಟೆ ನಿಗಮ,ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ತೋಟಗಾರಿಕೆ ಇಲಾಖೆ ನಗರದ ಕುಪ್ಪಣ್ಣ ಉದ್ಯಾನದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿದ್ದ ಮಾವು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರಕಿದೆ.

5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ: ಕುಪ್ಪಣ್ಣ ಪಾರ್ಕ್‌ನಲ್ಲಿ ಮೇ 27ರಿಂದ 30ರವರೆಗೆ ನಡೆದ ನಾಲ್ಕು ದಿನಗಳ ಮಾವು ಮೇಳದಲ್ಲಿ ಮೈಸೂರು ನಗರ, ಜಿಲ್ಲೆ ಸೇರಿದಂತೆ ಹೊರಭಾಗದಿಂದ 5ಸಾವಿರಕ್ಕೂ ಹೆಚ್ಚು ಭಾಗವಹಿಸಿ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಖರೀದಿಸಿರು ವುದು ದಾಖಲೆಯಾಗಿದೆ. ಜತೆಗೆ ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾ ಪುರ, ಕನಕಪುರದ ಮಾವು ಬೆಳೆಗಾರರು ವಿವಿಧ 12ಕ್ಕೂ ಹೆಚ್ಚು ತಳಿಯ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದರು.

74 ಟನ್‌ ಮಾವು ಮಾರಾಟ: ಮೇಳದಲ್ಲಿ ಮೈಸೂರು, ಮಂಡ್ಯ ಹಾಗೂ ರಾಮನಗರ ಭಾಗದ ರೈತರು ತೆರೆದಿದ್ದ 24 ಮಳಿಗೆಯಲ್ಲಿ74 ಟನ್‌ ಮಾವು ಮಾರಾಟವಾಗಿದೆ.ಬಾದಾಮಿ – 30, ರಸಪುರಿ – 08, ತೋತಪುರಿ – 05, ಮಲಗೋವಾ -04, ಸೆಂದುರ- 04 ಹಾಗೂ ದಸೇರಿ, ಹಿಮಾಪಸಂದ್‌, ಬಂಗಾನಪಲ್ಲಿ, ಸಕ್ಕರೆಗುತ್ತಿ ಸೇರಿದಂತೆ ಇತರೆ ತಳಿಯ 05 ಟನ್‌ಮಾವು ಮಾರಾಟವಾಗಿದ್ದು, ಬೆಳೆಗಾರರ ಮೊಗದಲ್ಲಿ ನಗು ತರಿಸಿದೆ.

ಬಾದಾಮಿಗೆ ಡಿಮ್ಯಾಂಡ್‌ ಒಂದೇ ಸೂರಿನಡಿ ವಿವಿಧ ತಳಿಯ ಮಾವು ಗ್ರಾಹಕರಿಗೆ ಲಭ್ಯವಾಗುಂತೆ ಮಾಡುವಲ್ಲಿಮಾವು ಮೇಳ ಯಶಸ್ವಿಯಾಯಿತು.12ಕ್ಕೂ ಹೆಚ್ಚು ತಳಿಯ ಹಣ್ಣುಗಳುಮೇಳದಲ್ಲಿದ್ದರೂ ಮಾದಾಮಿ ತಳಿಯಹಣ್ಣು 30 ಟನ್‌ನಷ್ಟು ಮಾರಾಟವಾಗಿದೆ.ಈ ಮೂಲಕ ಬಾದಾಮಿಗೆ ಮಾವು ಪ್ರಿಯರು ಮನಸೋತಿರುವುದು ವಿಶೇಷ.

Advertisement

ಮಾವು ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಸಾವಯವ ಮಾವು ಲಭ್ಯವಾಗು ವಂತೆಮಾಡುವ ಸಲುವಾಗಿ ಏರ್ಪಡಿಸಿದ್ದ ಮಾವು ಮೇಳಕ್ಕೆ ಉತ್ತಮಪ್ರತಿಕ್ರಿಯೆ ಸಿಕ್ಕಿದೆ. ಮುಂದಿನಬಾರಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸುವ ಚಿಂತನೆ ಇದೆ. – ರುದ್ರೇಶ್‌, ಉಪನಿರ್ದೇಶಕ ತೋಟಗಾರಿಕ ಇಲಾಖೆ ಮೈಸೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next