ಮಾವಿನ ಕಾಯಿ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆಯಂತೆ. ಬೇಸಿಗೆಯಲ್ಲಿ ಮಾವಿನ ಕಾಯಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಜೊತೆಗೆ ಅನೇಕ ಗಂಭೀರ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು.
ಮಾವಿನ ಕಾಯಿ ದೇಹದಲ್ಲಿನ ನೀರಿನ ಸರಬರಾಜಿಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡುವುದಿಲ್ಲ. ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾವಿನ ಕಾಯಿ ಉತ್ತಮ ಆಯ್ಕೆ.
ಮಾವಿನ ಕಾಯಿಯಲ್ಲಿ ವಿಟಮಿನ್ ಎ, ಸಿ ಮತ್ತು ಇ ಜೊತೆಗೆ ಕ್ಯಾಲ್ಸಿಯಂ, ರಂಜಕ ಮತ್ತು ನಾರಿನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ದೇಹವನ್ನು ಆರೋಗ್ಯವಾಗಿರಿಸುತ್ತದೆ. ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ. ದೇಹದಲ್ಲಿ ಕಬ್ಬಿಣದಂಶ ಪೂರೈಸಲು ಮಾವಿನಕಾಯಿ ಸಹಕಾರಿ.
ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಮಾವಿನ ಕಾಯಿ ಸೇವನೆ ಮಾಡಬೇಕು. ಬೇಸಿಗೆಯಲ್ಲಿ ಹೆಚ್ಚಾಗಿ ಮಸಾಲೆಯುಕ್ತ ಆಹಾರವನ್ನು ಸೇವಿಸಿದ ನಂತರ ಹೊಟ್ಟೆಯಲ್ಲಿ ಆಮ್ಲೀಯತೆ ಇರುತ್ತದೆ. ಆಮ್ಲೀಯತೆಯ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಮಾವಿನಕಾಯಿ ಕಪ್ಪು ಉಪ್ಪಿನೊಂದಿಗೆ ತಿನ್ನಿರಿ. ಇದು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲಾಗುತ್ತದೆ.
ಮಾವಿನ ಕಾಯಿ ತಿನ್ನುವುದರಿಂದ ದೇಹದ ತೂಕ ಇಳಿಕೆಯಾಗುತ್ತದೆ . ಹೊಟ್ಟೆ ಬೆಳೆಯುತ್ತಿದ್ದರೆ ಹಸಿ ಮಾವಿನ ಕಾಯಿ ತಿನ್ನಿರಿ. ಆರೋಗ್ಯವಂತ ವ್ಯಕ್ತಿಯು ಪ್ರತಿದಿನ 100 ರಿಂದ 150 ಗ್ರಾಂ ಕತ್ತರಿಸಿದ ಮಾವಿನ ಕಾಯಿಯನ್ನು ಸೇವಿಸಬಹುದು. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಪ್ರತಿದಿನ 10 ಗ್ರಾಂ ಮಾವಿನ ಕಾಯಿ ಸೇವಿಸುವುದು ಉತ್ತಮ.