ಮಂಗಳೂರು : ಬಜರಂಗ ದಳ ಕಾರ್ಯ ಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಪೋಸ್ಟ್ ಮಾಡಿದ್ದ ಮಂಗಳೂರು ಮುಸ್ಲಿಂ ಎಂಬ ದ ಫೇಸ್ ಬುಕ್ ಖಾತೆಯ ಐಕಾನ್ ಅನ್ನು ಲೈಕ್ ಮಾಡಿದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಶುಕ್ರವಾರ ತಿಳಿಸಿದ್ದಾರೆ.
ಮಣಿಪಾಲ ಮೂಲದ ಓರ್ವ ಮತ್ತು ಮುಲ್ಕಿ ಮೂಲದ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಮಂಗಳೂರು ಮುಸ್ಲಿಂ ಎಂಬ ಖಾತೆಯ ಕುರಿತು ತನಿಖೆ ಮುಂದುವರೆದಿದ್ದು, ಮೂಲವನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.
ಹರ್ಷ ಹತ್ಯೆಗೂ ಮುನ್ನ ಬೆದರಿಕೆ ಸ್ವರೂಪದ ಪೋಸ್ಟ್ ಗಳನ್ನೂ ಪೇಜ್ ನಲ್ಲಿ ಮಾಡಲಾಗಿತ್ತು, ಹರ್ಷ ಮಾತ್ರವಲ್ಲದೆ ಪತ್ರಕರ್ತರೊಬ್ಬರಿಗೂ ಟಾರ್ಗೆಟ್ ಮಾಡಿ ಬರೆಯಲಾಗಿತ್ತು. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದು, ಪೇಜ್ ನ ಜಾಡು ಬೆನ್ನತ್ತಿದ್ದಾರೆ.ಪ್ರಚೋದನಕಾರಿ ಪೋಸ್ಟ್ ಮಾಡಿದ ಫೇಸ್ ಬುಕ್ ಖಾತೆಯ ವಿರುದ್ಧ ಮಂಗಳೂರಿನಲ್ಲಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.
೨೦೧೬ ರಲ್ಲೂ ಇದೆ ಹೆಸರಿನ ಖಾತೆಯಲ್ಲಿ ಕಟೀಲು ದೇವಿ ಮತ್ತು ಸೀತಾ ಮಾತೆಗೆ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಆ ಬಳಿಕ ಖಾತೆಯನ್ನು ಬ್ಲಾಕ್ ಮಾಡಿಸಲು ಫೇಸ್ ಬುಕ್ ಗೆ ಮನವಿ ಮಾಡಲಾಗಿತ್ತು ಎಂದರು ತಿಳಿಸಿದರು.
ವಾಟ್ಸಾಪ್ ಗ್ರೂಪ್ ಗಳಲ್ಲಿ ಧರ್ಮದ ಮಹಿಳೆಯರಿಗೆ ನಿಬಂಧನೆ ವಿಧಿಸುವ ರೀತಿಯಲ್ಲಿ ಸಂದೇಶಗಳು ಹರಿದಾಡುತ್ತಿದ್ದು, ಅವುಗಳ ಕುರಿತು ತನಿಖೆ ನಡೆಸುವುದಾಗಿ ಶಶಿಕುಮಾರ್ ಅವರು ತಿಳಿಸಿದ್ದಾರೆ.
ಈಗಾಗಲೇ ಮಂಗಳೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ / ಅವಹೇಳನಕಾರಿ ಪೋಸ್ಟ್ ಗಳ ಬಗ್ಗೆ ನಿಗಾ ವಹಿಸಲು ಸೋಶಿಯಲ್ ಮೀಡಿಯಾ ಸೆಲ್ ಕಾರ್ಯಾರಂಭಗೊಂಡಿರುತ್ತದೆ.