Advertisement

ಮಂಗಳೂರಿನಲ್ಲಿ ನಟೋರಿಯಸ್‌ ರೌಡಿ ಮೇಲೆ ಫೈರಿಂಗ್‌; ಕಾನ್‌ಸ್ಟೇಬಲ್‌ಗೆ ಗಾಯ

09:42 AM May 30, 2019 | Vishnu Das |

ಮಂಗಳೂರು: ನಗರದ ಹೊರವಲಯದ ಪಚ್ಚನಾಡಿ ಎಂಬಲ್ಲಿ ಮಂಗಳವಾರ ರಾತ್ರಿ ನಟೋರಿಯಸ್‌ ರೌಡಿ, ಟಾರ್ಗೆಟ್‌ ಗ್ರೂಪ್‌ನ ಸದಸ್ಯ ಊಮರ್‌ ಫಾರೂಕ್‌ ಮೇಲೆ ಕಂಕನಾಡಿ ಠಾಣೆಯ ಪೊಲೀಸರು ಫೈರಿಂಗ್‌ ನಡೆಸಿದ ಘಟನೆ ನಡೆದಿದೆ.

Advertisement

ಎರಡು ಪ್ರಕರಣಗಳಲ್ಲಿ ಬೇಕಾಗಿದ್ದ ಉಮರ್‌ ಫಾರೂಕ್‌ನನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆಗಿಳಿದ ವೇಳೆ ಪೊಲೀಸರ ಮೇಲೆ ದಾಳಿ ನಡೆದಿದೆ.ದಾಳಿ ವೇಳೆ ಕಾನ್‌ಸ್ಟೇಬಲ್‌ ಸಂದೀಪ್‌ಗೆ ಗಾಯವಾಗಿದೆ. ತಕ್ಷಣ ಆತ್ಮರಕ್ಷಣೆಗಾಗಿ ಪೊಲೀಸರು ಉಮರ್‌ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಪೇದೆ ಮತ್ತು ಉಮರ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ವರ್ಷದ ಹಿಂದೆ ನಡೆದ ಟಾರ್ಗೆಟ್‌ ಗ್ರೂಪ್‌ನ ಇಲ್ಯಾಸ್‌ ಕೊಲೆ ಆರೋಪಿಯಾಗಿರುವ ಸಮೀರ್‌ ಹತ್ಯೆಗೆ  ಉಮರ್‌ ಫಾರೂಕ್‌ ಸ್ಕೆಚ್‌ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next