Advertisement
ಅಲ್ಲದೇ ಅತಿಯಾದ ಇಬ್ಬನಿ, ಮೋಡಕವಿದ ವಾತಾವರಣ ಇರುವುದರಿಂದ ಮಾವು ಬೆಳೆಗೆ ಪೂರಕ ವಾತಾವರಣವಿದೆ. ಆದರೆ ರೋಗ ಬಾಧೆ ಹೆಚ್ಚಲಿದ್ದು ಬೂದಿ ರೋಗ, ಚಿಬ್ಬುರೋಗ, ಅಂಗಮಾರಿ ರೋಗ, ಹೂಗೊಂಚಲಿನ ರೋಗ ಬರುವುದುಂಟು. ಅಲ್ಲದೆ, ನೊಣದ ಬಾಧೆ, ಕಾಡುವುದುಂಟು. ಈ ರೋಗಗಳನ್ನು ತಡೆಗಟ್ಟಬೇಕಾದರೆ ಪ್ರಾರಂಭಿಕ ಹಂತದಲ್ಲಿಔಷಧಿಗಳನ್ನು ಸಿಂಪಡಿಸಿದರೆ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Related Articles
Advertisement
ಉತ್ತಮ ಫಸಲು ನಿರೀಕ್ಷೆ: ಫಸಲು ಬರುವ ನಿರೀಕ್ಷೆ ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಮಳೆ ಆಗಿದ್ದರಿಂದ ಭೂ ಮಿಯಲ್ಲಿ ಉಷ್ಣಾಂಶ ಕಡಿಮೆಯಾಗಿ ಶೇ.80ರಷ್ಟು ಹೂವು ಬಿಡುವ ಅಂದಾಜಿದೆ. ತೋಟಗಾರಿಕೆ ಇಲಾಖೆ ಪ್ರಕಾರ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಎಂದರೂ ಪ್ರತಿ ವರ್ಷ ರೈತರು ಹೊಸದಾಗಿ ಸಸಿ ನೆಡುತ್ತಿರುವ ಕಾರಣ ತಾಲೂಕಿನಲ್ಲಿ ಸಾವಿರ ಹೆಕ್ಟೇರ್ ಪ್ರದೇಶ ಮಾವು ಬೆಳೆಯಿದೆ. ಈಗಾಗಲೇ ರೈತರು ಔಷಧಿ ಸಿಂಪಡಿಸುತ್ತಿದ್ದಾರೆ. ಹೆಚ್ಚಿನ ಫಸಲು ಬರುವ ನಿರೀಕ್ಷೆ ಹೊಂದಿದ್ದಾರೆ.
ಮಾವು ಬೆಳೆ ಇಳಿಮುಖವಾಗಲು ಕಾರಣ: ದೇವನಹಳ್ಳಿ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರಾರಂಭಗೊಂಡ ಮೇಲೆ, ಲೇಔಟ್ ಮತ್ತುಬಡಾವಣೆಗಳ ಹೆಚ್ಚಳದಿಂದಾಗಿ ಐಟಿಆರ್ ಮತ್ತುಕೈಗಾರಿಕಾ ಪ್ರದೇಶಗಳು ಬರುತ್ತಿರುವುದರಿಂದ ತಾಲೂಕಿನ ಸಾಕಷ್ಟು ರೈತರು ಭೂಮಿಯನ್ನು ಕಳೆದುಕೊಂಡಿದ್ದಾರೆ. ಅಂತರ್ಜಲ ಮಟ್ಟ ಕುಸಿತ ಸೇರಿದಂತೆ ಹಲವು ಕಾರಣ ಗಳಿಂದ ಮಾವಿನ ಮರದ ಸಂಖ್ಯೆಯಲ್ಲಿ ತಾಲೂಕಿನಲ್ಲಿ ಪ್ರಮಾಣ ಕಡಿಮೆಯಾಗಿದೆ. ಮಧ್ಯಮ ಪ್ರಮಾಣದಲ್ಲಿ ಮಾವು ಬೆಳೆಯುತ್ತಿರುವ ಬೆಳೆಗಾರರಿಗೆ ಮಾರುಕಟ್ಟೆ ಇಲ್ಲದ ಕಾರಣ ಬೆಂಗಳೂರು ನಗರಕ್ಕೆ ಹೋಗಬೇಕು. ಮಾರುಕಟ್ಟೆಗೆ ಹೋಗಲು ಆರ್ಥಿಕ ಸಮಸ್ಯೆ ಇದೆ.
ಜತೆಗೆ ಮಾವು ಸಂರಕ್ಷಣಾ ಘಟಕಗಳಿಲ್ಲ. ಮರಗಳನ್ನೇ ಬೇರೆ ಜಿಲ್ಲೆಯ ವ್ಯಾಪಾರಿಗಳಿಗೆ ಮುಂಗಡ ಹಣ ಪಡೆದು,ಗುತ್ತಿಗೆ ನೀಡುತ್ತಿದ್ದಾರೆ. ಇದರಿಂದ ರೈತರು ಲಾಭವಿಲ್ಲದೆ,ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಚಿಂತೆ ಪಡುವಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಈ ಬಾರಿಉತ್ತಮ ಮಳೆಯಾಗಿ ರುವುದರಿಂದ ಬೋರ್‌ವೆಲ್‌ಗಳಲ್ಲಿ ಅಲ್ಪಸ್ವಲ್ಪದ ನೀರು ಬರುವಂತೆ ಆಗಿದೆ. ಉಷ್ಣಾಂಶಹೆಚ್ಚಾಗಿರುವ ಕಾರಣ ಮರಗಳಲ್ಲಿ ಹೂಗಳು ಹೆಚ್ಚಾಗಿ ಕಂಡು ಬರುತ್ತಿದೆ. ಹೂ ಹೆಚ್ಚು ಬಿಟ್ಟಿರುವುದರಿಂದ ಉತ್ತಮ ಇಳುವರಿಯಾಗಲಿದೆ ಎಂದು ನಿರೀಕ್ಷೆ ಇದೆ ಎಂದು ರೈತರ ಅಭಿಪ್ರಾಯವಾಗಿದೆ. ಈ ಬಾರಿಯಂತೂ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಜನವರಿ,ಫೆಬ್ರವರಿ ತಿಂಗಳಿನೊಳಗೆ ಮಾವಿನ ಮರದಲ್ಲಿ ಹೂವುಹೆಚ್ಚಾಗಿ ಬಂದಿರುವುದರಿಂದ ರೈತರ ಮೊಗದಲ್ಲಿ ಸಂತಸದ ವಾತಾವರಣ ಮೂಡಿದೆ.
6753 ಹೆಕ್ಟೇರ್ ಮಾವು ಪ್ರದೇಶವಿದೆ : ತಾಲೂಕುವಾರು ಮಾವಿನಮರಗಳು: ದೇವನಹಳ್ಳಿ 619ಹೆಕ್ಟೇರ್, ದೊಡ್ಡಬಳ್ಳಾಪುರ 1350ಹೆಕ್ಟೇರ್, ನೆಲಮಂಗಲ 1184 ಹೆಕ್ಟೇರ್, ಹೊಸಕೋಟೆ3600ಹೆಕ್ಟೇರ್‌ನಲ್ಲಿ ಮಾವು ಬೆಳೆಬೆಳೆಯಲಾಗುತ್ತಿದೆ. ಕಳೆದ ವರ್ಷ7701 ಹೆಕ್ಟೇರ್ ಇದ್ದು 948ಹೆಕ್ಟೇರ್ ಮಾವು ಪ್ರದೇಶ ಜಿಲ್ಲೆಯಲ್ಲಿ ಕಡಿಮೆಯಾಗಿದೆ.
ಮಾವು ಬೆಳೆಗಳಿಗೆ ರೋಗಬಾಧೆ ನಿಯಂತ್ರಣಕ್ಕೆಔಷಧಿಗಳನ್ನು ಸಿಂಪಡಣೆ ಮಾಡಬೇಕು. ತೋಟಗಾರಿಕೆ ಇಲಾಖೆಯಿಂದ ಮಾವು ಬೆಳೆಗಾರರ ಮಂಡಳಿಯಿಂದ ರೈತರಿಗೆ ಪ್ಯಾಕೇಜ್ ಹಾಗೂ ಹಣ್ಣುಗಳನ್ನು ತುಂಬಲು ಕ್ರೇಟ್‌ಗಳು, ಹೊರ ರಾಜ್ಯ ಮತ್ತು ಜಿಲ್ಲೆಗಳಿಗೆ ಹಣ್ಣನ್ನು ಸರಬರಾಜು ಮಾಡಲು ಬಾಕ್ಸ್‌ಗಳನ್ನು ಸಹ ನೀಡಲಾಗುತ್ತಿದೆ. ಈ ಬಾರಿ ಮಾವಿನ ಮರಗಳಲ್ಲಿ ಉತ್ತಮ ಇಳುವರಿ ಬರುವ ಸಾಧ್ಯತೆಹೆಚ್ಚು ಇದೆ. ಮಾವು ಬೆಳೆಗಾರರು ಮಾರಾಟ ಮಾಡಲುಮಾವು ಮಂಡಳಿಯಿಂದ ಅವಕಾಶವನ್ನು ರೈತರಿಗೆ ಕಲ್ಪಿಸಿ ಕೊಡಲಾಗುವುದು. – ಗುಣವಂತ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ಸರ್ಕಾರಗಳು ಉತ್ತಮಮಾರುಕಟ್ಟೆ ವ್ಯವಸ್ಥೆ, ಬೆಂಬಲಬೆಲೆ ನೀಡಿದರೆ, ರೈತರು ಆರ್ಥಿಕವಾಗಿ ಮುಂದು ವರೆಯಲು ಸಾಧ್ಯವಾಗುತ್ತದೆ. ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಬೇರೆ ಕಡೆಯಿಂದ ಬಂದವರಿಗೆ ಮಾವಿನ ತೋಟಗಳನ್ನುಗುತ್ತಿಗೆ ನೀಡಿ, ಅವರು ನೀಡುವ ಅಲ್ಪಸ್ವಲ್ಪ ಹಣ ಪಡೆಯುವಂತೆ ಆಗಿದೆ. -ಹರೀಶ್, ರೈತ, ಕೊಯಿರ
– ಎಸ್.ಮಹೇಶ್