Advertisement

ಮಂಗಳೂರು: ಯುವಕ-ಯುವತಿ ಮೊಬೈಲ್ ನಲ್ಲಿ ಚಾಟ್; ವಿಮಾನ ಸಂಚಾರ ಮೊಟಕುಗೊಳಿಸಿ ತೀವ್ರ ತಪಾಸಣೆ!

02:31 PM Aug 14, 2022 | Team Udayavani |

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ವಿಮಾನವೊಂದರ ಸಂಚಾರವನ್ನು ಮೊಟಕುಗೊಳಿಸಿ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

Advertisement

ಯುವಕ ಯುವತಿ ಮೊಬೈಲ್ ನಲ್ಲಿ ಚಾಟ್ ಮಾಡುತ್ತಿದ್ದುದನ್ನು ಗಮನಿಸಿದ ಓರ್ವ ಪ್ರಯಾಣಿಕ ಸಂಶಯಗೊಂಡು ವಿಮಾನ‌‌‌‌‌ ಸಿಬಂದಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ವಿಮಾನ ಸಂಚಾರವನ್ನು ಮೊಟಕುಗೊಳಿಸಿ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾದ ಕ್ಯಾನ್​ಬೆರಾ ಏರ್​ಪೋರ್ಟ್​ನಲ್ಲಿ ಗುಂಡಿನ ದಾಳಿ: ಓರ್ವನ ಬಂಧನ

ಯುವತಿ ಬೆಂಗಳೂರಿಗೆ ಹೋಗಲು ಬೇರೆ ವಿಮಾನಕ್ಕೆ ಕಾಯುತ್ತಿದ್ದಳು. ಯುವಕ ಮುಂಬೈ ವಿಮಾನದಲ್ಲಿ ಹೊರಡಲು ಸಿದ್ದನಾಗಿದ್ದ. ಈ ವೇಳೆ ಯುವಕ ಯುವತಿಯರಿಬ್ಬರು ಗೆಳೆಯರಾಗಿದ್ದು ತಮಾಷೆಗಾಗಿ ಭದ್ರತೆ ಬಗ್ಗೆ ಮಾತನಾಡಿರುವುದಾಗಿ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next