Advertisement

ಮಂಗಳೂರು ವಿಶ್ವವಿದ್ಯಾನಿಲಯ: ಸಾಧಕ ವಿದ್ಯಾರ್ಥಿಗಳ ಯಶೋಗಾಥೆ

01:18 AM Mar 16, 2023 | Team Udayavani |

5 ಚಿನ್ನದ ಪದಕ ಗೆದ್ದ ಆಕಾಂಕ್ಷಾಗೆ ಐಎಎಸ್‌ ಆಗುವ ಕನಸು
ಉಪ್ಪಿನಂಗಡಿಯ ಹಿರೇ ಬಂಡಾಡಿಯ ತನುಜ್‌ ಕುಮಾರ್‌ ಶೆಟ್ಟಿ- ಗೀತಾ ಟಿ. ಶೆಟ್ಟಿ ದಂಪತಿಯ ಎರಡನೇ ಪುತ್ರಿ ಕೃಷಿಕ ಕುಟುಂಬದಿಂದ ಬಂದ ಆಕಾಂûಾ ಎನ್‌. ಶೆಟ್ಟಿ ಅವರು ಬಿಕಾಂನಲ್ಲಿ ಐದು ಚಿನ್ನದ ಪದಕಗಳನ್ನು ಪಡೆದು ಗಮನ ಸೆಳೆದಿ¨ªಾರೆ. ಕಾಲೇಜಿಗೆ ಟಾಪರ್‌ ಆಗಿರುವ ಇವರು ಪ್ರಸ್ತುತ ಸಿಎ ಆರ್ಟಿಕಲ್‌ಶಿಪ್‌ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ನಾಗರಿಕ ಸೇವಾ (ಐಎಎಸ್‌) ಕನಸು ನನಸು ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

Advertisement

ಕಲಿಕೆಗೆ ವಯಸ್ಸಿನ ಹಂಗಿಲ್ಲ 80ರ ಹರೆಯಲ್ಲಿ ಪಿಎಚ್‌ಡಿ
ಮಂಡ್ಯ ಜಿÇÉೆಯ ಪ್ರಭಾಕರ ಕುಪ್ಪಹಳ್ಳಿ ಎಂಬವರು ತಮ್ಮ 80ರ ಹರೆಯದಲ್ಲಿ ಮೆಟೀರಿಯಲ್‌ ಸೈನ್ಸ್‌ ವಿಭಾಗದಲ್ಲಿ ಪಿಎಚ್‌ಡಿ ಪದವಿ ಪಡೆದು ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದಾಗ ಸಭೆಯಲ್ಲಿ ಕರತಾಡನ ಮುಗಿಲು ಮುಟ್ಟಿತ್ತು. ಬೆಂಗಳೂರಿನ ದಯಾನಂದ ಸಾಗರ ಕಾಲೇಜ್‌ ಆಫ್ ಎಂಜಿನಿಯರಿಂಗ್‌ನಲ್ಲಿ ಪ್ರೇಮಾನಂದ ಸಾಗರ್‌ ವಸ್ತು ವಿಜ್ಞಾನ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ಇವರು ಕಾಲೇಜಿನ ಪ್ರಾಧ್ಯಾಪಕರೋರ್ವರ ಪ್ರೇರಣೆಯಿಂದ 2017ರಲ್ಲಿ ಸಂಶೋಧನೆ ಆರಂಭಿಸಿದ್ದರು. ಬೆಂಗಳೂರಿನ ಐಐಎಸ್ಸಿಯ ಎಂಜಿನಿಯರಿಂಗ್‌ ಪದವೀದರರಾಗಿದ್ದ ಅವರು ಬಾಂಬೇ ಐಐಟಿಯಲ್ಲಿ ಕಾರ್ಯ ನಿರ್ವಹಿಸಿದ್ದು, ಇಟ್ಸ್‌ಬರ್ಗ್‌ ವಿವಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೈಗೊಂಡಿದ್ದರು. ಪುತ್ರನೊಂದಿಗೆ ಆಗಮಿಸಿ ಪದವಿ ಸ್ವೀಕರಿಸಿದ್ದು, ಬಹುಕಾಲದ ಕನಸು ನನಸಾದ ಖುಷಿಯಲ್ಲಿದ್ದರು.

ಬಡತನ ಮೀರಿ 3 ಚಿನ್ನದ ಪದಕ ಪ್ರದೀಪ್‌
ಎಂ.ಎಸ್ಸಿ ಕೈಗಾರಿಕಾ ರಾಸಾಯನಿಕ ವಿಜ್ಞಾನದಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಮೊದಲ ರ್‍ಯಾಂಕ್‌ ಪಡೆದಿರುವ ಪ್ರದೀಪ್‌ ಶೆಟ್ಟಿ ಬಂಟ್ವಾಳ ತಾಲೂಕಿನ ರಾಯಿಯ ಸುಂದರ ಶೆಟ್ಟಿ ಸುಮಿತ್ರಾ ದಂಪತಿಯ ಪುತ್ರ. ಆರ್ಥಿಕವಾಗಿ ಬಡಕುಟುಂಬದ ಪ್ರದೀಪ್‌ ತಂದೆ ಹೊಟೇಲ್‌ ಕಾರ್ಮಿಕರಾಗಿದ್ದು, ತಾಯಿ ಬೀಡಿ ಕಟ್ಟುತ್ತಾರೆ. ಅರೆಕಾಲಿಕಾ ಕೆಲಸ ಮಾಡಿ ವ್ಯಾಸಂಗ ಮಾಡಿ
ರುವ ಅವರು ಫೆಲೋಶಿಪ್‌ ಸಿಕ್ಕಿದರೆ ಆರ್ಗಾನಿಕ್‌ ಕೆಮಿಸ್ಟ್ರಿಯಲ್ಲಿ ಪಿಎಚ್‌ಡಿ ಅಧ್ಯಯನ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದು, ಪ್ರಸ್ತುತ ಬೆಂಗಳೂರಿನ ಫಾರ್ಮಾ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.

49ರ ಹರೆಯದಲ್ಲಿ ಎರಡು ಚಿನ್ನದ ಪದಕ
ಬೆಂಗಳೂರಿನ ಬಸವನಗುಡಿಯ ಸುನೀತಾ ರವಿ ಯೋಗವಿಜ್ಞಾನದಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಮೊದಲ ರ್‍ಯಾಂಕ್‌ ಪಡೆದಿದ್ದಾರೆ. ನನಗೆ ಮೊದಲಿನಿಂದಲೂ ಯೋಗದಲ್ಲಿ ಆಸಕ್ತಿ. ಕುಟುಂಬದವರ ನೆರವು ಸಿಕ್ಕಿದ್ದರಿಂದ 49ರ ವಯಸ್ಸಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೈಗೊಳ್ಳಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು. ಅವರು ಈ ಹಿಂದೆ ಯೋಗ ತರಬೇತುದಾರರಾಗಿದ್ದರು.

ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗದ ಅಂಗವೈಕಲ್ಯ
ಉಡುಪಿ ಬ್ರಹ್ಮಾವರದ ಕೆಂಜೂರು ಗ್ರಾಮದ ದಿನಕರ ಕೆಂಜೂರು ಕೊರಗ ಸಮುದಾಯದಲ್ಲಿ ಪಿಎಚ್‌ಡಿ ಪದವಿ ಪಡೆದವರಲ್ಲಿ ಮೂರನೆಯವರು. ಮಂಗಳೂರು ವಿ.ವಿ.ಯಲ್ಲಿ ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕರಾಗಿರುವ ಒಂದು ಕಾಲು ಕಳೆದು ಕೊಂಡಿರುವ ಅವರ ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗಿಲ್ಲ. “ಕಠಿನ ಪರಿಶ್ರಮ, ಸಮರ್ಪಣ ಭಾವ, ಪತ್ನಿಯೂ ಸೇರಿದಂತೆ ಕುಟುಂಬದ ಸದಸ್ಯರ ನೆರವು, ಸಮುದಾಯ ಪ್ರಮುಖರ ಸಹಾಯದಿಂದ ಸಾಧನೆ ಮಾಡಲು ಸಾಧ್ಯವಾಗಿದೆ’ ಎನ್ನುತ್ತಾರೆ ದಿನಕರ್‌.

Advertisement

ಸಾಧನೆಗೆ ಅಂಧತ್ವ ಅಡ್ಡಿಯಾಗಿಲ್ಲ
ಅಂಧತ್ವ ಲೆಕ್ಕಿಸದೇ ಮಂಗಳೂರು ವಿ.ವಿ.ಯ ಇಂಗ್ಲಿಷ್‌ ಸ್ನಾತಕೋತ್ತರ ಪರೀಕ್ಷೆಯನ್ನು ಪ್ರಥಮ ದ‌ರ್ಜೆಯಲ್ಲಿ ಮಣ್ಣಗುಡ್ಡೆಯ ಸತೀಶ್‌ ಪೈ ಸವಿತಾ ಪೈ ದಂಪತಿಯ ಪುತ್ರ ಗಿರಿಧರ್‌ ಪೈ ಉತ್ತೀರ್ಣರಾಗಿದ್ದಾರೆ. “ಧ್ವನಿ ತಂತ್ರಾಂಶದ ನೆರವಿನಿಂದ ಓದುತ್ತಿದ್ದೆ. ತರಗತಿಯ ಪಾಠದ ಧ್ವನಿಮುದ್ರಣ ಮಾಡಿಕೊಂಡು ಕ್ಯಾಂಪಸ್‌ಗೆ ಪ್ರಯಾಣ ಮಾಡುವಾಗ ಆಲಿಸುತ್ತಿದ್ದೆ. ತಾಯಿಯ ಹಾಗೂ ವಿ.ವಿ.ಯ ಅಧ್ಯಾಪಕರ ಸಹಾಯದಿಂದ ಈ ಸಾಧನೆ ಸಾಧ್ಯವಾಗಿದೆ. ಎನ್‌ಇಟಿ ಬರೆದಿದ್ದು, ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ಪ್ರಾಧ್ಯಾಪಕನಾಗುವ ಕನಸು ಇದೆ ಎನ್ನುತ್ತಾರೆ ಗಿರಿಧರ್‌.

ಅಂಗವೈಕಲ್ಯ ಅಡ್ಡಿಯಾಗದು
ಪುತ್ತೂರು ತೆಂಕಿಲ ವಿವೇಕಾನಂದ ಕಾಲೇಜಿನ ಬಿ.ಎಡ್‌. ಪದವಿಯಲ್ಲಿ ಸಕಲೇಶಪುರದ ದಿ| ವಿಠಲ ಚೌಟ ಮತ್ತು ಸರೋಜಾ ಅವರ ಪುತ್ರಿ ಸೌಮ್ಯಾ ಕೆ.ವಿ. ಪ್ರಥಮ ರ್‍ಯಾಂಕ್‌ನೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ಎಳವೆಯಲ್ಲೇ ವೈದ್ಯರ ನಿರ್ಲಕ್ಷéದಿಂದ ಒಂದು ಕೈ ಕಳೆದುಕೊಂಡಿರುವ ಸೌಮ್ಯಾ ಅವರ ಕಲಿಕೆಗೆ ಅಂಗವೈಕಲ್ಯ ಅಡ್ಡಿಯಾಗಿಲ್ಲ. ಕರ್ನಾಟಕ ಮುಕ್ತ ವಿ.ವಿ.ಯಲ್ಲಿ ಎಂ.ಎಸ್ಸಿ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಇವರು ವಿವೇಕಾನಂದ ಸಿಬಿಎಸ್ಸಿ ಶಾಲೆಯಲ್ಲಿ ಗಣಿತದ ಅದ್ಯಾಪಿಕೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಉನ್ನತ ಶಿಕ್ಷಣ ಪಡೆದ ಬಳಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸನ್ನು ಇಟ್ಟುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next