Advertisement

ಯುಯುಸಿಎಂಎಸ್‌ ವಿಫ‌ಲವಾದಲ್ಲಿ ವಿ.ವಿ.ಯೇ ಫಲಿತಾಂಶ ಪ್ರಕಟಿಸಲಿದೆ

12:57 AM Feb 01, 2023 | Team Udayavani |

ಉಳ್ಳಾಲ : ಉನ್ನತ ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ (ಯುಯುಸಿಎಂಎಸ್‌)ಗೆ ಫಲಿತಾಂಶ ಪ್ರಕಟಿಸಲು ಸಾಧ್ಯವಿಲ್ಲವೆಂದಾದಲ್ಲಿ ಅದನ್ನು ಬದಿಗಿಟ್ಟು ಫೆ. 10ರಿಂದ 15ರ ಒಳಗೆ ವಿಶ್ವವಿದ್ಯಾನಿಲಯವೇ ಫಲಿತಾಂಶ ಪ್ರಕಟಿಸಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಪಿ.ಎಸ್‌. ಯಡಪಡಿತ್ತಾಯ ಹೇಳಿದರು.

Advertisement

ಅವರು ಮಂಗಳವಾರ ಕೊಣಾಜೆ ಮಂಗಳಗಂಗೋತ್ರಿಯ ಸಿ.ವಿ. ರಾಮನ್‌ ವೃತ್ತದಲ್ಲಿ ವಿ.ವಿ.ಯ ವಿವಿಧ ಶೈಕ್ಷಣಿಕ ಮತ್ತು ಹಾಸ್ಟೆಲಿನ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಸಂದರ್ಭ ಮಾತನಾಡಿದರು.

ಫ‌ಲಿತಾಂಶ ಪ್ರಕಟನೆ ಬಳಿಕ ಯುಯು ಸಿಎಂಎಸ್‌ನ ವೆಬ್‌ ಪೋರ್ಟಲ್‌ಗೆ ಅಪ್ಲೋಡ್‌ ಮಾಡುವ ಕುರಿತು ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನಿಸುತ್ತೇವೆ. ವಿದ್ಯಾರ್ಥಿ ವೇತನಕ್ಕೆ ಸಂಬಂಧಿ ಸಿ ಸಮಾಜ ಕಲ್ಯಾಣ ಇಲಾಖೆಯ ಜತೆಗೆ ಜ. 31ರಂದು ನಡೆಯಬೇಕಿದ್ದ ಸಭೆಯನ್ನು ಮುಂದೂ ಡಲಾಗಿದ್ದು, ವಿದ್ಯಾರ್ಥಿಗಳು ಎನ್‌ಎಸ್‌ಬಿ ಸ್ಕಾಲರ್‌ಶಿಪ್‌ನಿಂದ ವಂಚಿತರಾಗದಂತೆ ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನ ಕೈಗೊಳ್ಳ ಲಾಗುವುದು. ಹಾಸ್ಟೆಲ್‌ ಸಂಬಂ ಸಿದ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.

ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ ಗಿರೀಶ್‌ ಮಾತನಾಡಿ,  ವಿದ್ಯಾರ್ಥಿ ಶಕ್ತಿ ತೋರಿ  ಸಿದ್ದೇವೆ, ವ್ಯಕ್ತಿಯ ವಿರುದ್ಧ ಹೋರಾಟ ವಲ್ಲ, ವ್ಯವಸ್ಥೆಯ ವಿರುದ್ಧ ಹೋರಾಟ. ಭರವಸೆಯಂತೆ 10 ದಿನಗಳ ಒಳಗಡೆ ನ್ಯಾಯ ಸಿಗದೇ ಇದ್ದಲ್ಲಿ ಉಗ್ರ ರೀತಿಯಲ್ಲಿ ಹೋರಾಡುತ್ತೇವೆ ಎಂದು ಎಚ್ಚರಿಸಿದರು.

ಕುಲಸಚಿವ ಡಾ| ಕಿಶೋರ್‌ ಕುಮಾರ್‌ ಸಿ.ಕೆ., ವಿದ್ಯಾರ್ಥಿ ಮುಖಂಡರಾದ ಜೀವವಿಜ್ಞಾನ ವಿಭಾಗದ ಗೌತಮ್‌, ಅನ್ವಯಿಕ ಸಸ್ಯಶಾಸ್ತ್ರದ ಪ್ರಜ್ವಲ್‌, ಕೈಗಾರಿಕ ರಸಾಯನ ಶಾಸ್ತ್ರ ವಿಭಾಗದ ಪ್ರಮೀತಾ ಉಪಸ್ಥಿತರಿದ್ದರು.

Advertisement

ಯುಯುಸಿಎಂಎಸ್‌ ತಪ್ಪು; ವಿದ್ಯಾರ್ಥಿಗಳಿಗೆ ಮಾರಕ
ಪರೀûಾಂಗ ಕುಲಸಚಿವ ಪ್ರೊ| ಪಿ.ಎಲ್‌. ಧರ್ಮ ಮಾತನಾಡಿ, ಯುಯುಸಿಎಂಎಸ್‌ ಮಾಡುತ್ತಿರುವ ತಪ್ಪಿನಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಈ ವಿಚಾರದಲ್ಲಿ ಸರಕಾರದ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೇವೆ. ಯುಯುಸಿಎಂಎಸ್‌ ವ್ಯವಸ್ಥೆ ಜಾರಿಗೆ ಬಂದ ಬಳಿಕ ಪ್ರತೀ ಬಾರಿಯೂ ಫಲಿತಾಂಶ ನೀಡುವ ಮೊದಲು ರಾಜ್ಯ ತಂಡದ ಜತೆಗೆ ಸಂಪರ್ಕ ಇಡಬೇಕಾಗಿದೆ. ಇದರಿಂದ ಸಮಯ ಹಾಳಾಗುತ್ತಿದೆ. ವಿ.ವಿ.ಗಳು ನೇರವಾಗಿ ಅಂಕಪಟ್ಟಿ ಕೊಡಲೇಬಾರದು ಅನ್ನುವ ಆದೇಶ ಇತ್ತು. ಆದರೆ ಇದೀಗ ಅಂಕಪಟ್ಟಿ ನೀಡಬಹುದು ಎಂದು ರಾಜ್ಯಪಾಲರು ಆದೇಶವನ್ನು ಪರಿಷ್ಕರಿಸಿದ್ದಾರೆ. ಅಂಕಪಟ್ಟಿಯಲ್ಲಿ ತಪ್ಪಾದರೆ ಅದನ್ನು ವಿ.ವಿ.ಯೇ ಭರಿಸಬೇಕಾಗುತ್ತದೆ. ಜ. 9, 10ರಂದು ರಾಜ್ಯ ಎಲ್ಲ ವಿ.ವಿ.ಗಳ ಮುಖ್ಯಸ್ಥರ ಸಭೆಯಲ್ಲಿ ಯುಯುಸಿಎಂಎಸ್‌ ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಕಾಲರ್‌ ಶಿಪ್‌ನ ಜವಾಬ್ದಾರಿ ವಹಿಸಿಕೊಂಡಿದೆ. 24 ವಿ.ವಿ.ಗಳಿಗೂ ಒಂದೇ ರೀತಿಯ ಕಾರ್ಯಕ್ರಮ ಸರಕಾರ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಕೋಡ್‌ ತಪ್ಪಾಗಿ ಬರೆದರೆ ಇಡೀ ಫಲಿತಾಂಶದ ವ್ಯವಸ್ಥೆಗೆ ಸಮಸ್ಯೆಯಾಗುತ್ತದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next