Advertisement

ಮಂಗಳೂರು : ಕೊನೆಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಸಾಲ

12:33 PM Sep 19, 2022 | Team Udayavani |

ಮಂಗಳೂರು : ಮೂರು ವರ್ಷಗಳ ಬಳಿಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಯೋಜನೆಯಡಿ ಶಿಕ್ಷಣ ಸಾಲ ಲಭಿಸಲಿದೆ. ಈ ಕುರಿತು ಈಗಾಗಲೇ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ ಸುತ್ತೋಲೆ ಹೊರಡಿಸಲಾಗಿದೆ.

Advertisement

2022-23ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಿಇಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ ಸುತ್ತೋಲೆ ಹೊರಡಿಸಲಾಗಿದೆ. ಸೆ. 6ರಿಂದ ಅ. 20ರ ವರೆಗೆ ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಅಲ್ಲದೆ ಈಗಾಗಲೇ ಈ ಮೇಲಿನ ನಿಗಮಗಳ ಮೂಲಕ ಅರಿವು ಯೋಜನೆಯಡಿ ಸಾಲ ಪಡೆದವರಿಗೆ ಉಳಿದ 3 ಮತ್ತು 4ನೇ ಕಂತುಗಳ ಸಾಲ ಬಿಡುಗಡೆಗೂ ಇದೇ ದಿನಾಂಕದಡಿ ಅರ್ಜಿ ಹಾಕಬಹುದು.

ಇದನ್ನೂ ಓದಿ : ನೆಚ್ಚಿನ ನಾಯಕನಿಂದಲೇ ಮಗಳ ನಾಮಕರಣ ಮಾಡಲು 9ವರ್ಷ ಕಾದ ದಂಪತಿ, ಕೊನೆಗೂ ಘಳಿಗೆ ಬಂದೇ ಬಿಟ್ಟಿತು

Advertisement

Udayavani is now on Telegram. Click here to join our channel and stay updated with the latest news.

Next