Advertisement
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು ಕೇಂದ್ರದ ವತಿಯಿಂದ ರವಿವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಲಿವಿಂಗ್ ಲೈಫ್ ವಿದ್ ಈಸ್ ಆ್ಯಂಡ್ ಗ್ರೇಸ್’ ವಿಚಾರದಲ್ಲಿ ಅವರು ಪ್ರವಚನ ನೀಡಿದರು.
ಇನ್ನೊಬ್ಬರನ್ನು ಕ್ಷಮಿಸುವುದು, ಅವರನ್ನು ಆಶೀರ್ವದಿಸುವುದರಿಂದ ನಮ್ಮಲ್ಲಿ ಧನಾತ್ಮಕ ಶಕ್ತಿ ಉಂಟಾಗಿ ನಮ್ಮ ಶಾಂತಿ, ನೆಮ್ಮದಿಗೆ ಕಾರಣವಾಗುತ್ತದೆ. ಆ ಧನಾತ್ಮಕ ಶಕ್ತಿ ಇತರರನ್ನು ಕೂಡ ತಲುಪುತ್ತದೆ. ನಾವೆಲ್ಲರೂ ದೇವರ ಮಕ್ಕಳು. ಅವರು ಹೇಗಿರಬೇಕು ಎಂಬ ಬಗ್ಗೆ ನಮಗೆ ನಾವೇ ಪ್ರಶ್ನಿಸಿ ಅದರಂತೆ ಬದುಕಬೇಕು ಎಂದರು.
Related Articles
Advertisement
ಮನೆ, ಜಗತ್ತಿನ ನೆಮ್ಮದಿಗಾಗಿ….-ಸಮಾಜದಲ್ಲಿ ಮೂರು ವರ್ಗದವರಿದ್ದಾರೆ. ಬೆಂಕಿ ಹಾಕುವವರು, ಅದನ್ನು ನೋಡುತ್ತ ನಿಲ್ಲುವವರು ಮತ್ತು ಬೆಂಕಿ ನಂದಿಸುವವರು. ಈ ಪೈಕಿ ಬೆಂಕಿ ನಂದಿಸುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ.
-ರಾತ್ರಿ ಮಲಗುವ ಮೊದಲು ಮೊಬೈಲ್, ಟಿವಿ ನೋಡುವ ಬದಲು ಧ್ಯಾನ ಮಾಡಬೇಕು. ಕೆಟ್ಟ ಆಲೋಚನೆಗಳನ್ನು ದೂರ ಮಾಡಿಕೊಳ್ಳಬೇಕು. .
-ಕಲಿಯುಗದಲ್ಲಿ ನೆಮ್ಮದಿ, ಶಾಂತಿ ಇಲ್ಲದೆ ಚಡಪಡಿಸುತ್ತಿದ್ದೇವೆ. ಬೇರೆಯವರಿಂದ ತೊಂದರೆಯಾಗುತ್ತಿದೆ ಎಂದು ಭಾವಿಸುತ್ತಿದ್ದೇವೆ. ಆದರೆ ನಮಗೆ ನಾವೇ ಹೊಡೆದುಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು.