Advertisement

Mangaluru; ಎಂಡಿಎಂಎ ಡ್ರಗ್ಸ್‌ ಮಾರಾಟ: ಮೂವರ ಬಂಧನ

06:42 PM Aug 20, 2023 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

Advertisement

ತಲಪಾಡಿ ವೀರಾಂಜನೇಯ ವ್ಯಾಯಾಮ ಶಾಲೆ ಬಳಿಯ ನಿವಾಸಿಯಾಗಿದ್ದು ಚಾಲಕ ವೃತ್ತಿಯ ಅಬ್ದುಲ್‌ ರವೂಫ್(29), ಕಣ್ಣೂರು ಪಾನೂರಿನ ನಿವಾಸಿ ನಗರದ ಕಾಲೇಜೊಂದರ ಬಿ.ಕಾಂ ವಿದ್ಯಾರ್ಥಿ ಉಬೇದ್‌ ಕುನುಮಾಲ್‌(21) ಮತ್ತು ಚಿಕ್ಕಮಗಳೂರು ಮೂಡಿಗೆರೆ ಮಾವಿನಕೆರೆಯ ನಿವಾಸಿ ಚಿಕನ್‌ ಶಾಪ್‌ನ ಕೆಲಸಗಾರ ಮೊಹಮ್ಮದ್‌ ಇರ್ಷಾದ್‌(21) ಬಂಧಿತ ಆರೋಪಿಗಳು.

ಆರೋಪಿಗಳು ಶುಕ್ರವಾರ ನಗರದ ಜೆಪ್ಪು ಕಿಂಗ್ಸ್‌ ಗಾರ್ಡ್‌ನ ಬಳಿ ಜೆಪ್ಪು ಮಜಿಲ ರಸ್ತೆ ಬದಿ ಎಂಡಿಎಂಎ ಮಾರಾಟ ಮಾಡುತ್ತಿದ್ದಾಗ ಉಪನಿರೀಕ್ಷಕ ಮನೋಹರ್‌ ಪ್ರಸಾದ್‌ ಪಿ. ಅವರು ಸಿಬಂದಿ ಜತೆ ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿಗಳ ವಶದಿಂದ 13,750 ರೂ. ಮೌಲ್ಯದ 5.071 ಗ್ರಾಂ ಎಂಡಿಎಂಎ ಮಾದಕ ವಸ್ತು, 1,500 ರೂ. ನಗದು, ತೂಕ ಮಾಪನ, ಮೊಬೈಲ್‌ ಫೋನ್‌ ಮತ್ತು ಎರಡು ದ್ವಿಚಕ್ರ ವಾಹನ ಒಳಗೊಂಡಂತೆ ಒಟ್ಟು ಅಂದಾಜು 1,77,750 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next