Advertisement

Mangaluru ರಬ್ಬರ್‌ ಟ್ಯಾಪರ್‌: ವಿಮೆ ಯೋಜನೆ

11:31 PM Jan 13, 2025 | Team Udayavani |

ಮಂಗಳೂರು: ರಬ್ಬರ್‌ ಮಂಡಳಿಯು ಸಣ್ಣ ಹಿಡುವಳಿ ವಲಯದಲ್ಲಿ ಕೆಲಸ ಮಾಡುವ ರಬ್ಬರ್‌ ಟ್ಯಾಪರ್‌ಗಳಿಗೆ ವಿಮೆ ಯೋಜನೆಯನ್ನು ಜಾರಿಗೊಳಿಸಿದೆ.

Advertisement

ರಬ್ಬರ್‌ ಉತ್ಪಾದಕರ ಸಂಘಗಳ ಗುಂಪು ಸಂಸ್ಕರಣ ಕೇಂದ್ರಗಳಲ್ಲಿ ರಬ್ಬರ್‌ ಹಾಳೆ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು, ಒಂದು ಹೆಕ್ಟೇರ್‌ವರೆಗಿನ ರಬ್ಬರ್‌ ಪ್ರದೇಶವನ್ನು ಹೊಂದಿರುವ ಸಣ್ಣ ಬೆಳೆಗಾರರು ಮತ್ತು ಕನಿಷ್ಠ ನೂರು ಮಳೆ-ರಕ್ಷಕ ಮರಗಳಲ್ಲಿ ಸ್ವಯಂ-ಟ್ಯಾಪಿಂಗ್‌ ಅಭ್ಯಾಸ ಮಾಡುವವರು ಕೂಡ ಯೋಜನೆಗೆ ಸೇರಬಹುದು.

ಯೋಜನೆಯ ಫಲಾನುಭವಿಗಳು ಸಾಮಾನ್ಯ ಸಾವಿಗೆ 1 ಲಕ್ಷ ರೂ.ಮತ್ತು ಅಪಘಾತದ ಮರಣಕ್ಕೆ 5 ಲಕ್ಷ ರೂ. ವಿಮೆಯನ್ನು ಪಡೆಯಬಹುದು. ಈ ಅವ ಧಿಯಲ್ಲಿ ಪಾವತಿಸಿದ ಒಟ್ಟು ಪ್ರೀಮಿಯಂಗೆ ಅನುಗುಣವಾಗಿ ಕನಿಷ್ಠ ಪ್ರೀಮಿಯಂ ಮೊತ್ತ 300 ರೂ. ಆಗಿದ್ದು, ಈ ಯೋಜನೆಯಡಿ ಹೆಚ್ಚಿನ ವ್ಯಾಪ್ತಿಯನ್ನು ಬಯಸುವವರು ಹೆಚ್ಚಿನ ಮೊತ್ತವನ್ನು ಪಾವತಿಸಬಹುದು. ರಬ್ಬರ್‌ ಬೋರ್ಡ್‌ ಈ ಯೋಜನೆಗೆ ಮಂಡಳಿಯ ಪಾಲು ಪ್ರತಿ ಫಲಾನುಭವಿಗೆ 900 ರೂ. ನೀಡುತ್ತದೆ.

ಅರ್ಜಿದಾರರು 18ರಿಂದ 59 ವರ್ಷ ವಯಸ್ಸಿನವರಾಗಿರ ಬೇಕು ಮತ್ತು ಅವರು ಕನಿಷ್ಠ ಒಂದು ವರ್ಷದ ಕೆಲಸದ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸಲು ಫೆ.21 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ರಬ್ಬರ್‌ ಮಂಡಳಿಯ ಹತ್ತಿರದ ಕಚೇರಿಗಳನ್ನು ಸಂಪರ್ಕಿಸಿ ಎಂದು ಮಂಗಳೂರು ಉಪ ರಬ್ಬರ್‌ ಉತ್ಪಾದನ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.