Advertisement

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

09:05 PM Dec 20, 2024 | Team Udayavani |

ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ಆಮಿಷವೊಡ್ಡಿದ ಪ್ರಕರಣದಲ್ಲಿ ಒಡಿಶಾದ ಗಂಜಂ ಜಿಲ್ಲೆಯ ಕಣಾತಲ ವಾಸುದೇವ ರೆಡ್ಡಿ (25) ಎಂಬಾತನನ್ನು ಬಂಧಿಸಲಾಗಿದೆ.

Advertisement

ದೂರುದಾರರೊಬ್ಬರಿಗೆ ಲಿಂಕ್‌ ಕಳುಹಿಸಿ ಹಂತಹಂತವಾಗಿ ಅವರಿಂದ 10,84,017 ರೂ. ಪಡೆದು ವಂಚನೆ ಮಾಡಿದ್ದ. ಈ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ಈಗಾಗಲೇ ಪ್ರಕರಣದಲ್ಲಿ ದಸ್ತಗಿರಿಯಾಗಿದ್ದ ನಡವೂಲು ವೀರ ವೆಂಕಟ ಸತ್ಯ ನಾರಾಯಣ ರಾಜು ಎಂಬಾತನ ಹೇಳಿಕೆಯಂತೆ ವಾಸುದೇವ ರೆಡ್ಡಿ ಎಂಬಾತನನ್ನು ಡಿ.18ರಂದು ಹೊಸ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆತ ದುಬಾೖಗೆ ತೆರಳುತ್ತಿದ್ದಾಗ ಇಮಿಗ್ರೇಶನ್‌ ಅಧಿಕಾರಿಗಳು ವಶಕ್ಕೆ ಪಡೆದು ಸೆನ್‌ ಪೊಲೀಸರಿಗೆ ಹಸ್ತಾಂತರಿಸಿದ್ದರು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ರವಿಶಂಕರ್‌ ಮಾರ್ಗದರ್ಶನದಂತೆ ಸೆನ್‌ ಠಾಣಾಧಿಕಾರಿಯಾದ ಎಸಿಪಿ ರವೀಶ್‌ ನಾಯಕ ಮತ್ತು ಸೆನ್‌ ನಿರೀಕ್ಷಕರಾದ ಸತೀಶ್‌ ಎಂ.ಪಿ. ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next