ಮಂಗಳೂರು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಢಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ವಾಮಂಜೂರು ಬಳಿ ನಡೆದಿದೆ.
ಜ.27ರಂದು ಹರ್ಷಿತಾ ತನ್ನ ಸಹೋದರಿ ಹರ್ಷಿಣಿ, ಸ್ನೇಹಿತರಾದ ನಯನಾ ಮತ್ತು ಅನನ್ಮಿತಾ ಅವರೊಂದಿಗೆ ಕುಡುಪು ದೇವಸ್ಥಾನ ಕಡೆಗೆ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಧ್ಯಾಹ್ನ 1.15ರ ಸುಮಾರಿಗೆ ವಾಮಂಜೂರು ಮಂಗಳಜ್ಯೋತಿ ಬಳಿ ಹಿಂದಿನಿಂದ ಬಂದ ಬೈಕ್ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಹರ್ಷಿಣಿ, ನಯನಾ ಮತ್ತು ಅನನ್ಮಿತಾ ಗಾಯಗೊಂಡಿದ್ದಾರೆ. ಬೈಕ್ ಸವಾರನಿಗೂ ಸಣ್ಣಪುಟ್ಟ ಗಾಯವಾಗಿದೆ. ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹುರಿಯತ್ ಕಾನ್ಫರೆನ್ಸ್ ಕಚೇರಿಯನ್ನು ಮುಟ್ಟುಗೋಲು ಹಾಕಿದ ಎನ್‌ಐಎ