ಮಂಗಳೂರು: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವೀರವೆಂಕಟೇಶ ದೇವರ ಬ್ರಹ್ಮರಥೋತ್ಸವ “ಮಂಗಳೂರು ರಥೋತ್ಸವ’ ಶನಿವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
Advertisement
ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರಿಂದ ಬೆಳಗ್ಗೆ ಪ್ರಧಾನ ದೇವರಾದ ಶ್ರೀ ವೀರ ವೆಂಕಟೇಶ ದೇವರಿಗೆ ಶತ ಕಲಶಾಭಿಷೇಕ, ಪವಮಾನಾಭಿಷೇಕ, ಗಂಗಾಭಿಷೇಕ ನೆರವೇರಿದವು. ಸಂಜೆ ಶ್ರೀಗಳು ಯಜ್ಞದ ಮಹಾ ಪೂರ್ಣಾಹುತಿ ಮತ್ತು ರಥಾರೂಢ ಶ್ರೀ ವೀರ ವೆಂಕಟೇಶ ದೇವರಿಗೆ ಮಹಾ ಮಂಗಳಾರತಿಯನ್ನು ನೆರವೇರಿಸಿದರು.
ಬಳಿಕ ಬ್ರಹ್ಮರಥವನ್ನು ಎಳೆಯಲಾಯಿತು. ದೇಶ – ವಿದೇಶಗಳ ಸಹಸ್ರಾರು ಭಜಕರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.