Advertisement

Mangaluru: ನಗರ, ಗ್ರಾಮಾಂತರ ಸೇರಿದಂತೆ ಹಲವೆಡೆ ಮಳೆ

08:34 AM Mar 22, 2024 | Team Udayavani |

ಮಂಗಳೂರು: ಕಳೆದ ಕೆಲ‌‌‌ ದಿನಗಳಿಂದ ಕಾದು ಕೆಂಡದಂತಾಗಿದ್ದ ದಕ್ಷಿಣ ಕನ್ನಡದ ಹಲವು ಕಡೆಗಳಲ್ಲಿ ಶುಕ್ರವಾರ ಬೆಳಗ್ಗೆ ಮಳೆ ಸುರಿದಿದೆ.

Advertisement

ಜಿಲ್ಲೆಯ ಮಂಗಳೂರು ನಗರ, ಗ್ರಾಮಾಂತರ ಭಾಗದ ಅಲ್ಲಲ್ಲಿ, ಬದಿಯಡ್ಕ, ಪಾಣಾಜೆ,‌ ಸುಳ್ಯ ಸಹಿತ ಜಿಲ್ಲೆಯ ಹಲವು ಕಡೆ ಮಳೆಯಾಗಿದೆ.

ಉಳಿದಂತೆ ಜಿಲ್ಲೆಯಾದ್ಯಂತ ಮೋಡ, ಸೆಕೆಯ ವಾತಾವರಣ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳ‌ ಕಾಲ ಕರಾವಳಿ ಭಾಗದ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next