Advertisement
ಬಹುತೇಕ ಭೂಭಾಗವನ್ನು ಸಮುದ್ರ ಕಬಳಿಸಿಕೊಂಡಿದೆ. ಮಳೆಗಾಲದಲ್ಲಿ ಸಮುದ್ರ ಮಟ್ಟ ಮೇಲೆ ಬರುವುದು ಸಾಮಾನ್ಯವಾದರೂ ಆಗಸ್ಟ್ ವೇಳೆ ಮತ್ತೆ ಮಟ್ಟ ಕೆಳಗೆ ಹೋಗುತ್ತದೆ. ಆದರೆ 2-3 ವರ್ಷಗಳಿಂದ ಸೆಪ್ಟಂಬರ್ – ಅಕ್ಟೋಬರ್‌ನಲ್ಲೂ ನೀರಿನ ಮಟ್ಟ ಕೆಳಗಿಳಿಯುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.ಹಿಂದೆ ಬೀಚ್ ಉತ್ಸವ, ಗಾಳಿಪಟ ಉತ್ಸವ ಸಹಿತ ಹಲವು ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದ್ದ ಈ ಬೀಚ್ ರಾಜ್ಯದಲ್ಲೇ ಖ್ಯಾತಿ ಗಳಿಸಿತ್ತು. ಈಗ ಪ್ರವಾಸಿಗರು ಬಂದರೆ ಓಡಾಡುವುದಕ್ಕೆ ಕಷ್ಟವಾಗುತ್ತಿದೆ.
Related Articles
Advertisement
ವಾಟರ್‌ಸ್ಪೋರ್ಟ್ಸ್ ಕೂಡ ಇಲ್ಲಪಣಂಬೂರು ಬೀಚ್‌ನಲ್ಲಿ ವಾಟರ್‌ಸ್ಪೋರ್ಟ್ಸ್ ಜನಪ್ರಿಯಗೊಂಡಿತ್ತು. ಮಳೆಗಾಲದ ಕಾರಣದಿಂದ ಸದ್ಯ ಸ್ಥಗಿತಗೊಳಿಸಲಾಗಿದೆ. ಈಗ ಮತ್ತೆ ಆರಂಭಿಸಬೇಕಾದರೆ ಸ್ಥಳಾವಕಾಶ ಬೇಕಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ವಾಟರ್‌ನ್ಪೋರ್ಟ್ಸ್ ಆರಂಭಿಸಲಾಗುತ್ತಿಲ್ಲ. ಕುಳಾಯಿ ಬ್ರೇಕ್‌ವಾಟರ್ ಕಾರಣ?
ಪಣಂಬೂರಿನಿಂದ ಎರಡು ಕಿ.ಮೀ. ಉತ್ತರಕ್ಕೆ ಕುಳಾಯಿಯಲ್ಲಿ ಮೀನುಗಾರಿಕೆ ಜೆಟ್ಟಿ ಹಾಗೂ ಅದರ ಪೂರಕ ಬ್ರೇಕ್‌ವಾಟರ್ ನಿರ್ಮಾಣ ನಡೆದಿದೆ. ಹಾಗಾಗಿಯೇ ಇಲ್ಲಿ ಸಮುದ್ರ ಒಳ ಬಂದಿರುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು. ಈ ಕುರಿತು ಕರ್ನಾಟಕದ ಕಡಲತೀರಗಳ ಶೋರ್‌ಲೈನ್ ಮ್ಯಾನೇಜ್‌ಮೆಂಟ್ ಪ್ಲಾನ್ ಅನ್ನು ಚೆನ್ನೈಯ ನ್ಯಾಷನಲ್ ಸೆಂಟರ್ ಫಾರ್ ಸಸ್ಟೆನೆಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್ ಸಂಸ್ಥೆ ಸಿದ್ಧಪಡಿಸುತ್ತಿದೆ. ಅವರು ಪಣಂಬೂರು ಸಹಿತ ರಾಜ್ಯದ ಕಡಲತೀರದಲ್ಲಿ ಸಮುದ್ರದ ಚಲನೆ ಕುರಿತು ಅಧ್ಯಯನ ನಡೆಸಿದ್ದು, ಅದರಲ್ಲಿ ಕಳೆದ ಒಂದು ದಶಕದ ವಿವರಗಳು ಬರಲಿವೆ ಎಂದು ಬಂದರು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. “ಬ್ರೇಕ್‌ವಾಟರ್ ಹಾಗೂ ಸಮುದ್ರದ ಅಲೆಗಳ ಚಲನೆ ಆಧರಿಸಿಕೊಂಡು ಸಮುದ್ರದಲ್ಲಿ ಒಂದೆಡೆ ಮರಳು ಶೇಖರಣೆಯಾದರೆ ಇನ್ನೊಂದೆಡೆ ಕಡಲ್ಕೊರೆತ ಉಂಟಾಗುವುದು ಇದೆ.” –ಪ್ರೊ| ಮನು, ಎನ್‌ಐಟಿಕೆ ಸುರತ್ಕಲ್ ಜಲಸಂಪನ್ಮೂಲ ಹಾಗೂ ಸಾಗರ ಎಂಜಿನಿಯರಿಂಗ್ ವಿಭಾಗದ ಉಪನ್ಯಾಸಕರು – ವೇಣುವಿನೋದ್ ಕೆ.ಎಸ್.