Advertisement

ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಮೂರು ಅಂಗಿ ಧರಿಸಿದ್ದ ಶಂಕಿತ ಉಗ್ರ!

01:29 PM Nov 21, 2022 | Team Udayavani |

ಮಂಗಳೂರು : ನಾಗುರಿ ಸಮೀಪ ಆಟೋದಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಒಂದೊಂದೇ ಮಾಹಿತಿ ಬಹಿರಂಗವಾಗುತ್ತಿವೆ. ಶಂಕಿತ ಉಗ್ರ ಶಾಕೀರ್‌ ತನ್ನ ಗುರುತನ್ನು ಮರೆಮಾಚಿ ಕಾರ್ಮಿಕನಂತೆ ಕಾಣಲು ಮೈಸೂರಿನಿಂದ ಬರುವಾಗಲೇ 3 ಅಂಗಿ ಧರಿಸಿದ್ದ ಹಾಗೂ ಕೈಯಲ್ಲಿ ಪ್ಲಾಸ್ಟಿಕ್‌ ಚೀಲ ಹಿಡಿದುಕೊಂಡಿದ್ದ.
ರಿಕ್ಷಾ ಹತ್ತುವ ಮೊದಲು ಒಂದು ಅಂಗಿ ತೆಗೆದಿದ್ದ ಪಡೀಲ್‌ನಲ್ಲಿ ರಿಕ್ಷಾ ಹತ್ತುವ ಮೊದಲು 1 ಅಂಗಿ ತೆಗೆದಿದ್ದ. ಸ್ಫೋಟ ಸಂಭವಿಸಿದಾಗ ಎರಡೂ ಅಂಗಿಗಳನ್ನು ತೆಗೆದಿದ್ದ ಎಂದು ತಿಳಿದುಬಂದಿದೆ. ಬಸ್‌ನಿಂದ ಇಳಿದು ಕಂಕನಾಡಿ ಬಳಿ ವೈನ್‌ಶಾಪ್‌ ಒಂದರಿಂದ ಮದ್ಯ ಖರೀದಿಸಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ.

Advertisement

ಮೈಸೂರಲ್ಲಿ ವಾಸಿಸುತ್ತಿದ್ದ ಶಾರೀಕ್‌
ಶಂಕಿತ ಮೈಸೂರು ನಗರದ ಅಗ್ರಹಾರದಲ್ಲಿರುವ ಮೊಬೈಲ್‌ ಅಂಗಡಿಯಲ್ಲಿ ಕೆಲವು ತಿಂಗಳ ಕಾಲ ಮೊಬೈಲ್‌ ರಿಪೇರಿಯ ತರಬೇತಿ ಕಾರ್ಯದಲ್ಲಿ ಇದ್ದ ಎಂಬುದು ಗೊತ್ತಾಗಿದೆ. ಅವನಿಗೆ ಮನೆ ಬಾಡಿಗೆ ಕೊಟ್ಟಿದ್ದ ಮಹಿಳೆಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶಂಕಿತ ಉಗ್ರನ ಜತೆ ಮೊಬೈಲ್‌ ಟ್ರೈನಿಂಗ್‌ಗೆ ಹೋಗಿದ್ದ ಮೈಸೂರಿನ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗೆಯೇ ಶಂಕಿತನಿಗೆ ಹತ್ತಕ್ಕೂ ಹೆಚ್ಚು ಮೊಬೈಲ್‌ಗ‌ಳನ್ನು ನೀಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.

ಸ್ಫೋಟಕ ವಸ್ತುಗಳು ಪತ್ತೆ
ಶಂಕಿತ ಉಗ್ರ ತಾರೀಖ್‌ ವಾಸವಿದ್ದ ಮೈಸೂರಿನ ಮನೆಯೊಳಗೆ ಹೋದ ಪೊಲೀಸರು ಮತ್ತು ಎಫ್ಎಸ್‌ಎಲ್‌ ತಂಡಕ್ಕೆ ಶಾಕ್‌ ಆಗಿದ್ದು, ಮನೆಯಲ್ಲಿ ಬಾಂಬ್‌ ತಯಾರಿಕೆಯ ವಸ್ತುಗಳು ಪತ್ತೆಯಾಗಿವೆ. ಸಕೀìಟ್‌ ಬೋರ್ಡ್‌, ಸ್ಮಾಲ್‌ ಬೋಲ್ಟ್, ಬ್ಯಾಟರಿ, ಮೊಬೈಲ…, ವುಡನ್‌ ಪೌಡರ್‌, ಅಲ್ಯೂಮಿನಿಯಂ, ಮಲ್ಟಿ ಮೀಟರ್‌, ವೈರ್‌, ಪ್ರಶರ್‌ ಕುಕ್ಕರ್‌ ಸೇರಿದಂತೆ ಸ್ಫೋಟಕಕ್ಕೆ ಅಗತ್ಯವಿರುವ ವಸ್ತುಗಳು ಪತ್ತೆಯಾಗಿವೆ. ಇದರೊಂದಿಗೆ ಒಂದು ಮೊಬೈಲ…, ಎರಡು ನಕಲಿ ಆಧಾರ್‌ ಕಾರ್ಡ್‌, ಒಂದು ನಕಲಿ ಪಾನ್‌ ಕಾರ್ಡ್‌, ಒಂದು ಫಿನೋ ಡೆಬಿಟ್‌ ಕಾರ್ಡ್‌ ಸಿಕ್ಕಿದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ನಾವೂರು ಮಾದರಿಯಲ್ಲಿ ರಿಹರ್ಸಲ್‌ ಪ್ರಯತ್ನ ನಡೆದಿತ್ತೇ?
ಮಂಗಳೂರು : ನಾಗುರಿ ಸಮೀಪ ಶನಿವಾರ ಸಂಜೆ ಸಂಭವಿಸಿದ ಸ್ಫೋಟ ಪ್ರಕರಣಕ್ಕೂ ಬಂಟ್ವಾಳ ತಾಲೂಕಿನ ನಾವೂರು ಸಮೀಪದ ಕುದುರುವಿನಲ್ಲಿ ನಡೆದಿದೆ ಎನ್ನಲಾದ ಬಾಂಬ್‌ ರಿಹರ್ಸಲ್‌ಗ‌ೂ ಸಂಬಂಧ ಇದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆಯ ಎಳೆಯನ್ನು ಮುಂದುವರಿಸಿದ್ದಾರೆ.

ಐಸಿಸ್‌ ಜತೆ ಸಂಬಂಧ ಹೊಂದಿದ್ದ ಆರೋಪಿಗಳ ಪೈಕಿ ಮಾಝ್ ಮುನೀರ್‌ ನನ್ನು ಸೆ. 21ರಂದು ಶಿವಮೊಗ್ಗ ಪೊಲೀಸರು ಮಂಗಳೂರಿಗೆ ಕರೆತಂದು ನಾವೂರಿನ ನೇತ್ರಾವತಿ ನದಿ ಕುದುರು ಪ್ರದೇಶದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಿರುವರು ಎನ್ನಲಾದ ಪ್ರದೇಶಗಳಲ್ಲಿ ಮಹಜರು ನಡೆಸಿದ್ದರು. ಈ ಕುರಿತಂತೆ ಪೊಲೀಸ್‌ ತನಿಖೆ ನಡೆಯುತ್ತಿದೆ.

Advertisement

ಈಗ ನಾಗುರಿಯ ಸ್ಫೋಟ ನಾವೂರು ಪ್ರಕರಣಕ್ಕೆ ಹಚ್ಚು ಪುಷ್ಟಿ ನೀಡುತ್ತಿದೆ. ಜಿಲ್ಲೆಯಲ್ಲಿ ಬಾಂಬ್‌ ಸ್ಫೋಟ ರಿಹರ್ಸಲ್‌ಗೆ ತಯಾರಿ ನಡೆದಿತ್ತೇ ಎಂಬ ಅನುಮಾನ ದಟ್ಟವಾಗಿದೆ. ಪೊಲೀಸರ ತನಿಖೆಯ ಆಯಾಮ ಕೂಡ ಈ ನಿಟ್ಟಿನಲ್ಲೂ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next