ಸುರತ್ಕಲ್: ಕೆಚ್ಚೆದೆಯ ಹೋರಾಟದ ಪರಾಕ್ರಮಕ್ಕೆ ಯುವ ಸಮಾಜಕ್ಕೆ ಸ್ಫೂರ್ತಿಯ ಶಕ್ತಿಯಾಗಿರುವ ಶಿವಾಜಿ ಮಹಾರಾಜರ ಪ್ರತಿಮೆ ನನ್ನ ಕ್ಷೇತ್ರದ ಕೋಡಿಕೆರೆ ಶಿವಾಜಿ ನಗರದಲ್ಲಿ ಸ್ಥಾಪನೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.
ನಮ್ಮ ದೇಶದ ಮಣ್ಣಿನಲ್ಲಿ ಇಂದು ಪರಿವರ್ತನೆಯ ಯುಗ ಆರಂಭವಾಗಿದೆ. ಪರಿವರ್ತನೆ ಯಾವುದೇ ಒಂದು ವರ್ಗದ ವಿರುದ್ಧವಲ್ಲ. ಶಿವಾಜಿಯ ಸ್ವರೂಪವನ್ನು ಯುವಕರು ತಮ್ಮ ಹೃದಯದಲ್ಲಿ ಇರಿಸಿಕೊಂಡರೆ ಹಿಂದೂ ಧರ್ಮವನ್ನು ರಕ್ಷಣೆ ಮಾಡಲು ಬೇರೆ ಯಾರೂ ಬೇಕಿಲ್ಲ. ವೀರರ ಸ್ಮಾರಕ ನಿರ್ಮಾಣ ಕಾರ್ಯವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.
ಕೋಡಿಕೆರೆಯಲ್ಲಿ ಶಿವಾಜಿ ಫ್ರೆಂಡ್ಸ್ ಸರ್ಕಲ್ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಿರ್ಮಿಸಿದ ಶಿವಾಜಿಯ ಪ್ರತಿಮೆ ಹಾಗೂ ಸರ್ಕಲ್ ಅನಾವರಣ ಕಾರ್ಯಕ್ರಮ ಶನಿವಾರ ಸಂಜೆ ನೆರವೇರಿತು.
ವೇದಿಕೆಯಲ್ಲಿ ಪ್ರಾಸ್ತಾವಿಕ ಮಾತಾನ್ನಾಡಿದ ಕಾರ್ಪೋರೇಟರ್ ವರುಣ್ ಚೌಟ, ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸುವುದು ನಮ್ಮೆಲ್ಲರ ಬಹುದಿನಗಳ ಕನಸಾಗಿತ್ತು. ಶಾಸಕರ ಮುತುವರ್ಜಿಯಿಂದ ಇಲ್ಲಿ ಶಿವಾಜಿ ಸರ್ಕಲ್ ನಿರ್ಮಾಣವಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
Related Articles
ವೇದಿಕೆಯಲ್ಲಿ ಪ್ರತಿಮೆ ನಿರ್ಮಿಸಿದ ಮನೋಜ್ ಕಣಪ್ಪಾಡಿ, ಸಂಸ್ಥೆಯ ಗೌರವಾಧ್ಯಕ್ಷ ವಿಜಯ್ ಕುಮಾರ್ ಅಮೀನ್, ಸೀತಾರಾಮ್ ಪೂಜಾರಿ, ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಕುಲಾಲ್, ಮುಡಾ ಎಇ ಆರತಿ, ಶನೀಶ್ವರ ಸೇವಾ ಸಮಿತಿ ಅಧ್ಯಕ್ಷ ಸುಬ್ರಮಣ್ಯ ರೆಡ್ಡಿ, ಪ್ರಶಾಂತ್ ಮುಡಾಯಿಕೋಡಿ, ಪವಿತ್ರ ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.
ಈ ಭಾಗದಲ್ಲಿ ಪ್ರಥಮ ಬೃಹತ್ ಪ್ರತಿಮೆ ಇದಾಗಿದೆ.