Advertisement

ಪುರಸಭೆ ವಿರುದ್ಧ ಅಸಮಾಧಾನ; ಘಟಕಕ್ಕೆ ಬೀಗ: ಕಂಚಿನಡ್ಕಪದವು ತ್ಯಾಜ್ಯ ಘಟಕಕ್ಕೆ ಖಾದರ್‌ ಭೇಟಿ

01:35 AM Jun 29, 2022 | Team Udayavani |

ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದ ಅವ್ಯವಸ್ಥೆಯ ದೂರಿನ ಹಿನ್ನೆಲೆಯಲ್ಲಿ ಮಂಗಳ ವಾರ ಸಂಜೆ ಘಟಕಕ್ಕೆ ಭೇಟಿ ನೀಡಿದ ವಿಧಾನಸಭಾ ವಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್‌ ಅವರು ಪರಿಶೀಲನೆ ನಡೆಸಿ ಮುಂದೆ ಸ್ಪಷ್ಟ ತೀರ್ಮಾನ ಕೈಗೊಳ್ಳುವವರೆಗೆ ಯಾವುದೇ ಕಸ ವಾಹನ ಸಾಗಾಟ ವಾಹನ ಬರುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೀಗ ಜಡಿದರು.

Advertisement

ಈ ವೇಳೆ ಮಾತನಾಡಿದ ಶಾಸಕರು, ಗ್ರಾ.ಪಂ., ಸ್ಥಳೀಯರ ವಿರೋಧದ ನಡುವೆಯೂ ಪುರಸಭೆ ಇಲ್ಲಿ ತ್ಯಾಜ್ಯ ಘಟಕ ಆರಂಭಿಸಿದ್ದು, ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೇವಲ ಒಣ ಕಸವನ್ನು ಮಾತ್ರ ಹಾಕಲು ಅವಕಾಶ ನೀಡಲಾಗಿತ್ತು. ಆದರೆ ಪುರಸಭೆಯು ಅವೈಜ್ಞಾನಿಕ ರೀತಿಯಲ್ಲಿ ಕಸವನ್ನು ನಿರ್ವಹಿಸುತ್ತಿದ್ದು ಇಲ್ಲಿನ ಪರಿಸರದ ಮೇಲೆ ಸವಾರಿ ಮಾಡಲು ಹೊರಟಿದೆ. ಮುಂದೆ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೆ ಯಾವುದೇ ಕಸದ ವಾಹನಕ್ಕೆ ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ಹೋರಾಟ ಸಮಿತಿಯ ನೇತೃತ್ವ ವಹಿಸುವುದಾಗಿ ತಿಳಿಸಿದರು.

ಬಂಟ್ವಾಳ ತಾ.ಪಂ. ಮಾಜಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಯಶವಂತ ದೇರಾಜೆ, ಪ್ರಮುಖರಾದ ಅಬ್ದುಲ್‌ ರಝಾಕ್‌ ಕುಕ್ಕಾಜೆ, ಅಬೂಬಕ್ಕರ್‌ ಸಜೀಪ, ತುಳಸಿ, ಹನೀಫ್‌, ಮೋಹನ ಪೂಜಾರಿ, ಪ್ರತಾಪ್‌ ಕರ್ಕೇರ, ಕೆ.ಬಿ. ಸುಲೈಮಾನ್‌ ಮೊದಲಾದವರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next