Advertisement
ಪಾಲಿಕೆ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶಕ್ಕೆ ನಗರದ ವಿವಿಧ ಜಂಕ್ಷನ್ಗಳಲ್ಲಿ ನಾಲ್ಕು ವರ್ಷಗಳ ಹಿಂದೆ ಇಂತಹ ದಾರಿ ಸೂಚನ ಫಲಕಗಳನ್ನು ಅಳವಡಿಸಲಾಗಿದೆ.
ಪ್ರಸ್ತುತ ಕೆಲವು ಬೋರ್ಡ್ಗಳು ಮಳೆಗೆ ಪಾಚಿ ಕಟ್ಟಿದ್ದು, ಬಿಸಿಲಿನ ಹೊಡೆತಕ್ಕೆ ಸಿಲುಕಿ ಬಣ್ಣವೂ ಮಾಸಿದೆ. ನಗರ ಭಾಗಕ್ಕಿಂತ ಹೊರಗಿರುವ ಪ್ರದೇಶದಲ್ಲಿ ಬೊರ್ಡ್ಗಳು ಹುಲ್ಲು ಪೊದೆಗಳಿಂದ ಆವೃತವಾಗಿದ್ದು, ಬೋರ್ಡ್ನಲ್ಲಿ ಏನು ಬರೆದಿದೆ ಎಂದು ಯಾರಿಗೂ ಕಾಣಿಸುವುದಿಲ್ಲ. ಕೆಲವು ಕಡೆಗಳಲ್ಲಿ ಬೋರ್ಡ್ ಅಳವಡಿಸಲಾಗಿರುವ ಕಂಬಗಳೂ ತುಕ್ಕು ಹಿಡಿದಿದ್ದು, ಮುಂದಿನ ದಿನಗಳಲ್ಲಿ ಮುರಿದು ಬೀಳುವ ಪರಿಸ್ಥಿತಿಯಲ್ಲಿದೆ. ಶೀಘ್ರ ಸರಿಪಡಿಸಲಾಗುವುದು
ನಗರದಲ್ಲಿ ವಿವಿಧೆಡೆ ಸ್ಥಳ ಸೂಚಕ ಫಲಕಗಳು ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿರುವ ಕುರಿತಂತೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಎಲ್ಲೆಲ್ಲ ಹಾಳಾಗಿದೆ ಅವುಗಳನ್ನು ಶೀಘ್ರ ಇವುಗಳನ್ನು ಸರಿಪಡಿಸಿ ಮತ್ತೆ ಅಳವಡಿಸಲಾಗುವುದು.
– ಮನೋಜ್ ಕುಮಾರ್ ಮೇಯರ್
Related Articles
Advertisement
ಲಕ್ಷಾಂತರ ರೂ.ವೆಚ್ಚ ಮಾಡಿ ಅಳವಡಿ ಸಿರುವ ಇಂತಹ ಫಲಕಗಳು ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಉಪಯೋಗ ವಾಗುವ ಬದಲು ನಿಷ್ಪ್ರಯೋಜಕವಾಗಿರುವುದು ಖೇದಕರ. ಈ ಕುರಿತು, ಮಹಾನಗರ ಪಾಲಿಕೆ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
-ಭರತ್ ಶೆಟ್ಟಿಗಾರ್