Advertisement

Mangaluru: ಕರ್ಣಾಟಕ ಬ್ಯಾಂಕ್‌: 336.07 ಕೋ.ರೂ. ನಿವ್ವಳ ಲಾಭ

04:29 AM Oct 24, 2024 | |

ಮಂಗಳೂರು: ಕರ್ಣಾಟಕ ಬ್ಯಾಂಕ್‌ 2024-25ರ ಎರಡನೇ ತ್ತೈಮಾಸಿಕ ಅವಧಿಯಲ್ಲಿ 336.07 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಹಿಂದಿನ ಸಾಲಿನ ಇದೇ ಅವಧಿಯಲ್ಲಿ ಬ್ಯಾಂಕ್‌ 330.26 ಕೋಟಿ ರೂ. ಲಾಭ ಗಳಿಸಿತ್ತು.

Advertisement

ಮಂಗಳೂರಿನಲ್ಲಿ ಬುಧವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ 2024ರ ಸೆ.30ಕ್ಕೆ ಕೊನೆಗೊಂಡ ತ್ತೈಮಾಸಿಕ ಹಾಗೂ ಅರ್ಧವರ್ಷದ ಫಲಿತಾಂಶಗಳನ್ನು ಅನುಮೋದಿಸಲಾಯಿತು. ಪ್ರಸಕ್ತ ಹಣಕಾಸು ವರ್ಷದ ಮೊದಲ ಅರ್ಧ ವರ್ಷದಲ್ಲಿ 736.40 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದ ರೂ. 700.96 ಕೋಟಿಗೆ ಹೋಲಿಸಿದರೆ ನಿವ್ವಳ ಲಾಭವು ಶೇ. 5.06ರಷ್ಟು ಸುಧಾರಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್‌ ಹೇಳಿದ್ದಾರೆ.

ಬ್ಯಾಂಕಿನ ಒಟ್ಟು ವ್ಯವಹಾರವು 2024ರ 2ನೇ ತ್ತೈಮಾಸಿಕದ ವೇಳೆಗೆ 1,75,284.08 ಕೋ. ರೂ. ಅಗಿತ್ತು. ಇದು ಹಿಂದಿನ ವರ್ಷದ ಅವಧಿಯಲ್ಲಿ 1,56,467.71 ಕೋಟಿ ರೂ. ಆಗಿದ್ದು, ಶೇ. 12.03 ಬೆಳವಣಿಗೆ ದಾಖಲಿಸಿದೆ. ಬ್ಯಾಂಕಿನ ಒಟ್ಟು ಠೇವಣಿಗಳು 2024ರ 2ನೇ ತ್ತೈಮಾಸಿಕದ ವೇಳೆಗೆ 99,967.99 ಕೋ. ರೂ. ಆಗಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ ಶೇ.11ರಷ್ಟು ಏರಿಕೆ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next