ಮಂಗಳೂರು: ನಗರದ ಬಲ್ಮಠ ದ ಜ್ಯೂಸ್ ಜಂಕ್ಷನ್ ಬಳಿ ಶನಿವಾರ ( ನವೆಂಬರ್ 26) ಪಾರ್ಕ್ ಮಾಡಲಾಗಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.
Advertisement
ವಾಹನ ದಟ್ಟಣೆಯ ಸಮಯದಲ್ಲಿ ಫೋರ್ಡ್ ಕಾರಿನ ಎಂಜಿನ್ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಆದರೆ, ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ.
ಬೆಂಕಿಯನ್ನು ಕೂಡಲೇ ನಂದಿಸಲಾಗಿದೆ. ಕಾರಿಗೆ ಹೆಚ್ಚಿನ ಹಾನಿಯಾಗಿದೆ.ಬೆಂಕಿ ಅವಘಡಕ್ಕೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ.
ನಗರದಲ್ಲಿ ಉಗ್ರ ರಿಕ್ಷಾದಲ್ಲಿ ನಡೆಸಿದ ಕುಕ್ಕರ್ ಪ್ರಕರಣ ನಡೆದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಜನರಲ್ಲಿ ಕೆಲ ಹೊತ್ತು ಆತಂಕ ಮೂಡಿಸಿತು.