ಮಂಗಳೂರು: ನಗರದ ಹಂಪನ ಕಟ್ಟೆಯ ಜುವೆಲರಿ ಅಂಗಡಿ ಯಲ್ಲಿ ಕಳೆದ ಶುಕ್ರವಾರ ನಡೆದ ಕೊಲೆ, ದರೋಡೆ ಪ್ರಕರಣದ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಆರೋಪಿ ಪರಾರಿಯಾದ ಆಟೋ ರಿಕ್ಷಾ ಚಾಲಕನನ್ನು ವಿಚಾರಣೆ ಗೊಳಪಡಿಸಿದ್ದಾರೆ.
Advertisement
ಅಂಗಡಿಯ ಸಿಬಂದಿ ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ಯ (55) ಅವರಿಗೆ ಚೂರಿಯಿಂದ ಇರಿದಿದ್ದ ಆರೋಪಿ ಅನಂತರ ಸ್ವಲ್ಪ ದೂರಕ್ಕೆ ಓಡಿ ಹೋಗಿ ಆಟೋರಿಕ್ಷಾವೊಂದರಲ್ಲಿ ಹೋಗಿದ್ದು ಸಿಸಿ ಟಿವಿ ಕೆಮರಾದಲ್ಲಿ ದಾಖಲಾಗಿತ್ತು. ಆರೋಪಿ ಯಾವ ಕಡೆ ಹೋಗಿದ್ದ ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.