Advertisement

ಮಂಗಳೂರು: ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

08:42 AM Jan 23, 2023 | Team Udayavani |

ಮಂಗಳೂರು: ವಿವಾಹಿತ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೆಕಾರು ಸಮೀಪ ಮಾಡೂರು ಎಂಬಲ್ಲಿ ಭಾನುವಾರ (ಜ.22)  ಸಂಜೆ ನಡೆದಿದೆ.

Advertisement

ಮಾಡೂರು ನಿವಾಸಿ ಚಂದ್ರಶೇಖರ -ಗಿರಿಜ ಅವರ ಪುತ್ರಿ ದಿವ್ಯ (26 ವರ್ಷ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಜ.21 ರಂದು ದಿವ್ಯ ತನ್ನ ಗಂಡನೊಂದಿಗೆ ನೆರೆಮನೆಯ ಕಾರ್ಯಕ್ರಮವೊಂದಕ್ಕೆ ಹೋಗಿದ್ದು, ಅಲ್ಲಿ ಗಂಡ-ಹೆಂಡತಿ ನಡುವೆ ಮನಸ್ತಾಪವಾಗಿರುವುದರಿಂದ ದಿವ್ಯ ಒಬ್ಬರೆ ಮನೆಗೆ ಹಿಂತಿರುಗಿದ್ದಾರೆ. ಬಳಿಕ ಜ.22 ರಂದು ಸಂಜೆ ಮನೆಯ ಬೆಡ್‌ ರೂಂನಲ್ಲಿ ದಿವ್ಯ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಯ ಬಳಿಕ ತಾಯಿ ಗಿರಿಜಾ ಕೂಡಲೇ ದಿವ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.  ಅಲ್ಲಿ ವೈದ್ಯರು ಪರೀಕ್ಷಿಸಿ, ಆದಾಗಲೇ ದಿವ್ಯ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ದಿವ್ಯ ಒಂದೂವರೆ ವರ್ಷದ ಹಿಂದೆ ಹರೀಶ್‌ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು.

ಈ ಕುರಿತು ದಿವ್ಯ ಅವರ ತಾಯಿ ಗಿರಿಜಾ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next