Advertisement
ಹಿಂದಿನಿಂದಲೂ ಕಾರ್ಕಳ ಭಾಗದಲ್ಲಿ ಕಟ್ಟಡ, ಮನೆ ಸಹಿತ ಹಲವು ನಿರ್ಮಾಣ ಕಾರ್ಯಗಳಿಗೆ ಮಂಗಳೂರಿನ ವಿವಿಧ ಕಡೆಗಳಿಂದ ಮರಳನ್ನು ಸಾಗಿಸುವ ಪ್ರಮಾಣ ಹೆಚ್ಚಿದ್ದು, ಇದರಲ್ಲಿ ಅಕ್ರಮದ ಮೂಲಕವೇ ಹೆಚ್ಚಿನ ಪ್ರಮಾಣದಲ್ಲಿ ಮರಳನ್ನು ಸಾಗಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಾರ್ಕಳ ನಗರ, ಗ್ರಾಮಾಂತರ ಪೊಲೀಸರು ಗಸ್ತು ಕಾರ್ಯಾಚರಣೆ ವೇಳೆ ಗಣಿ ಅಕ್ರಮಕ್ಕೆ ಸಂಬಂಧಿಸಿ ಹಲವು ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ. ಇತ್ತೀಚೆಗೆ ಕಾರ್ಕಳ ಕುಕ್ಕುಂದೂರು ಸರ್ವಜ್ಞ ನಗರ ಸರ್ಕಲ್, ಬೆಳ್ಮಣ್ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ದ್ವಾರದ ಬಳಿ ಕೌಡೂರು ಕಂಪನ ಎಂಬಲ್ಲಿ ಅಕ್ರಮ ಮರಳು ಸಾಗಾಟದ ಟಿಪ್ಪರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಚೆಕ್‌ಪೋಸ್ಟ್ ಮೂಲಕ ರಾತ್ರಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಒಳರಸ್ತೆಗಳಲ್ಲಿಯೂ ಪೊಲೀಸ್ ಇಲಾಖೆ ನಿಗಾವಹಿಸಿದೆ.
Related Articles
ಹಿಂದೆ ಅಕ್ರಮ ಮರಳು ಸಾಗಾಟಕ್ಕೆ ಸ್ಟೇಶನ್ ಬೇಲ್ ಪಡೆಯಲು ಸಾಧ್ಯವಾಗುವಂತ ಸಾಮಾನ್ಯ ಕಳ್ಳತನ ಕೇಸು ದಾಖಲಿಸಲಾಗುತ್ತಿತ್ತು. ಇದೀಗ ಭಾರತೀಯ ಸಂಹಿತೆ ಪರಿಷ್ಕೃತಗೊಂಡಿರುವುದರಿಂದ ಬಿಎನ್‌ಎಸ್ 112 ಆಕ್ಟ್‌ನಂತೆ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಒಪ್ಪಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಪೊಲೀಸ್ ಗಸ್ತು, ಚೆಕ್‌ಪೋಸ್ಟ್ ತಪಾಸಣೆ ಬಿಗುಕಾರ್ಕಳ ವ್ಯಾಪ್ತಿಯಲ್ಲಿ ಒಂದೇ ದಿನ ಮರಳು ಕಳ್ಳತನ, ಪರವಾನಿಗೆ ಇಲ್ಲದೆ ಅಕ್ರಮಕ್ಕೆ ಸಾಗಾಟಕ್ಕೆ ಸಂಬಂಧಿಸಿ ಮೂರು ಪ್ರಕರಣ ದಾಖಲಿಸಲಾಗಿದ್ದು, ಈಗಾಗಲೆ ಹಲವು ಪ್ರಕರಣಗಳು ದಾಖಲಿಸಿದ್ದೇವೆ. ಆರೋಪಿಗಳನ್ನು ವಿಚಾರಿಸಿದಾಗ ಮಂಗಳೂರಿನಲ್ಲಿ ವಿವಿಧ ಕಡೆ ಕದ್ದಿರುವ ಮರಳನ್ನು ಅಕ್ರಮವಾಗಿಸಿ ಸಾಗಿಸಿ ಇಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಬಗ್ಗೆ ತಿಳಿದುಬಂದಿದೆ. ಕಾರ್ಕಳ ಸಂಪರ್ಕಿಸುವ ಎಲ್ಲ ಪ್ರಮುಖ ರಸ್ತೆ, ಹೆದ್ದಾರಿಗಳಲ್ಲಿ ಪೊಲೀಸ್ ಗಸ್ತು, ಚೆಕ್‌ಪೋಸ್ಟ್ ತಪಾಸಣೆ ಬಿಗುಗೊಳಿಸಿದ್ದೇವೆ.
– ಅರವಿಂದ್ ಕಲಗುಜ್ಜಿ, ಡಿವೈಎಸ್‌ಪಿ, ಕಾರ್ಕಳ