Advertisement

Mangaluru ಗಾಂಜಾ ಮಾರಾಟ ಪ್ರಕರಣ: ಇಬ್ಬರಿಗೆ ಶಿಕ್ಷೆ

09:04 PM Dec 31, 2023 | Team Udayavani |

ಮಂಗಳೂರು: ಗಾಂಜಾ ಮಾರಾಟ ಪ್ರಕರಣದಲ್ಲಿ ಮಂಗಳೂರಿನ ನ್ಯಾಯಾಲಯವು ಇಬ್ಬರಿಗೆ ಶಿಕ್ಷೆ ವಿಧಿಸಿದೆ.

Advertisement

ಮೋನಿಶ್‌ ಸುವರ್ಣ ಬೊಕ್ಕಪಟ್ಣ ಮತ್ತು ಅಖಿಲ್ ಕೋಡಿಕಲ್‌ ಶಿಕ್ಷೆಗೆ ಒಳಗಾದವರು. ಇವರು 2021ರ ಎ.17ರಂದು ಸುಲ್ತಾನ್‌ ಬತ್ತೇರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಅವರನ್ನು ಬರ್ಕೆ ಇನ್‌ಸ್ಪೆಕ್ಟರ್‌ ಹಾರೂನ್‌ ಅಖ್ತರ್‌ ಬಂಧಿಸಿ, ಸುಮಾರು 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪಿಎಸ್‌ಐ ಶೋಭಾ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನಗರದ 6ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಪೂಜಾಶ್ರೀ ಅವರು ಡಿ.30ರಂದು ಒಂದು ತಿಂಗಳ ಕಠಿನ ಸಜೆ ಹಾಗೂ 1,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜನಾರ್ದನ್‌ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next