Advertisement
ಪ್ರಕರಣ- 1ಎ.11ರಂದು ದೂರುದಾರ ವ್ಯಕ್ತಿಯ ವಾಟ್ಸ್‌ಆ್ಯಪ್‌ಗೆ ಅಪರಿಚಿತ ವ್ಯಕ್ತಿ 6262948264 ಸಂಖ್ಯೆಯಿಂದ “ಆನ್‌ಲೈನ್ ಅರ್ನಿಂಗ್ ಟಾಸ್ಕ್’ ಎಂಬ ಸಂದೇಶದೊಂದಿಗೆ ಲಿಂಕ್ ಕಳುಹಿಸಿದ್ದ. ಲಿಂಕ್ ಬಳಸಿ ಟಾಸ್ಕ್ಗಳನ್ನು ಪೂರೈಸುವಂತೆ ತಿಳಿಸಿದ್ದ. ಅನಂತರ ದೂರುದಾರ ವ್ಯಕ್ತಿಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 3,01,505 ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ.
ಅಪರಿಚಿತ ವ್ಯಕ್ತಿಯೋರ್ವ 8969209811 ಸಂಖ್ಯೆಯಿಂದ ದೂರುದಾರ ವ್ಯಕ್ತಿಯ ವಾಟ್ಸ್ ಆ್ಯಪ್‌ಗೆ “ಪಾರ್ಟ್ ಟೈಮ್ ಜಾಬ್ ಆನ್‌ಲೈನ್ ಅಮೆಜಾನ್ ಬಿಸಿನೆಸ್’ ಎಂದು ಸಂದೇಶ ಕಳುಹಿಸಿದ್ದ. ಅನಂತರ ಟೆಲಿಗ್ರಾಂ ಚಾನೆಲ್‌ನಲ್ಲಿ ಸದಸ್ಯನಾಗುವಂತೆ ತಿಳಿಸಿದ. ಬಳಿಕ ಅದರಲ್ಲಿರುವ ಟಾಸ್ಕ್ಗಳಲ್ಲಿ ಭಾಗಿಯಾಗಿ ಹಣ ಗಳಿಸಬಹುದು ಎಂದು ತಿಳಿಸಿದ. ಇದನ್ನು ನಂಬಿದ ದೂರುದಾರ ವ್ಯಕ್ತಿ 200 ರೂ. ಪಾವತಿಸಿದರು. ಅದಕ್ಕೆ ಅಪರಿಚಿತ ವ್ಯಕ್ತಿ ಕಮಿಷನ್ ಸೇರಿಸಿ 395 ರೂ. ಮರುಪವಾತಿ ಮಾಡಿದ. ಬಳಿಕ ಅಧಿಕ ಲಾಭ ದೊರೆಯಬಹುದೆಂದು ದೂರುದಾರ ವ್ಯಕ್ತಿ ಹಂತ ಹಂತವಾಗಿ ಒಟ್ಟು 3.30 ಲ.ರೂ. ಹಣ ಪವಾತಿಸಿದ್ದಾರೆ. ಆದರೆ ಅವರಿಗೆ ಯಾವುದೇ ಹಣ ವಾಪಸ್ ಬಂದಿಲ್ಲ.