Advertisement

Mangaluru: ಶಿಕ್ಷಣದ ಜತೆಗೆ ಇತರ ಕೌಶಲಗಳ ಜ್ಞಾನ ಅಗತ್ಯ: ಪ್ರೊ| ನರೇಂದ್ರ ಎಲ್‌. ನಾಯಕ್‌

11:27 PM Dec 10, 2023 | Team Udayavani |

ಮಂಗಳೂರು: ಅಡುಗೆ ಮಾಡುವುದು ಒಂದು ಕಲೆ ಹಾಗೂ ವಿಜ್ಞಾನ. ಶಿಕ್ಷಣದ ಜತೆಗೆ ಮಕ್ಕಳು ಅಡುಗೆ ಕಲೆಯಂತಹ ವಿವಿಧ ಕೌಶಲಗಳ ಬಗ್ಗೆಯೂ ವಿಶೇಷ ಒತ್ತು ನೀಡುವ ಅಗತ್ಯ ಇದೆ ಎಂದು ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ನರೇಂದ್ರ ಎಲ್‌. ನಾಯಕ್‌ ಹೇಳಿದರು.

Advertisement

ಕೊಡಿಯಾಲ್ ಬೈಲ್ ಎಕ್ಸ್‌ಪರ್ಟ್‌ ಪ. ಪೂ. ಕಾಲೇಜಿನಲ್ಲಿ ರವಿವಾರ ಆಯೋಜಿಸಿದ “ಎಕ್ಸ್‌ಪರ್ಟ್‌ ಮಾಸ್ಟರ್‌ ಚೆಫ್‌ ಸ್ಪರ್ಧೆ-2023’ರ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.

ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಪೂರಕವಾಗುವ ಕಾರ್ಯಚಟು ವಟಿಕೆಗಳನ್ನು ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆ ನಡೆಸುತ್ತ ಬಂದಿದ್ದು, ಈ ನಿಟ್ಟಿನಲ್ಲಿ ವಿಶೇಷ ಮಾಸ್ಟರ್‌ ಚೆಫ್‌ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಓಶಿಯನ್‌ ಪರ್ಲ್ನ ಎಕ್ಸಿಕ್ಯೂಟಿವ್‌ ಚೆಫ್‌ ದೇವಬೃತ್‌ ಮಂಡಲ್‌ ಸ್ಪರ್ಧಾ ಕೂಟ ಉದ್ಘಾಟಿಸಿ ಶುಭ ಹಾರೈಸಿದರು.

ಸಂಸ್ಥೆಯ ಉಪಾಧ್ಯಕ್ಷೆ ಡಾ| ಉಷಾಪ್ರಭಾ ಎನ್‌.ನಾಯಕ್‌ ಮಾತನಾಡಿ, ಆಹಾರವು ಆ ಪ್ರದೇಶದ ಸಂಸ್ಕೃತಿಯನ್ನು
ಬಿಂಬಿಸುತ್ತದೆ. ಕರಾವಳಿಯಲ್ಲಿ ಮನಗೆದ್ದಿ ರುವ ಆಹಾರ ಪದಾ ರ್ಥಗಳಂತೆಯೇ ಇತರ ಪ್ರದೇಶಗಳು ವಿಭಿನ್ನ ತಿಂಡಿ ತಿನಿಸುಗಳ ಮೂಲಕ ಮನೆಮಾತಾಗಿದೆ. ಹೀಗಾಗಿ ಆಹಾರದ ಮೂಲಕ ಅಲ್ಲಿನ ಸಂಸ್ಕೃತಿಯನ್ನು ಕಾಣಲು ಸಾಧ್ಯ ಎಂದು ಹೇಳಿದರು.

Advertisement

ಸಂಸ್ಥೆಯ ಟ್ರಸ್ಟಿ ಉಸ್ತಾದ್‌ ರಫೀಕ್‌ ಖಾನ್‌ ಅಡುಗೆ ಸ್ಪರ್ಧೆಯ ಸ್ಪರ್ಧಿಗಳಿಗೆ ಶುಭ ಕೋರಿದರು. ಸ್ಪರ್ಧೆಯ ಪ್ರಾಯೋ
ಜಕರಾದ ಸ್ಪೈಸೀಸ್‌ ಆ್ಯಂಡ್‌ ಚೆಫ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ದಿನೇಶ್‌ ಪಿ. ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ರಾಮಚಂದ್ರ ಭಟ್‌ ಉಪಸ್ಥಿತರಿದ್ದರು.

ಸ್ಪರ್ಧೆಯ ತೀರ್ಪುಗಾರರಾದ ಎಸ್‌ಆರ್‌ಎಂ ಡಿಸ್ಟ್ರಿಬ್ಯೂಶನ್‌ನ ಮನಮೋಹನ್‌ ಪೈ, ಹೋಮ್‌ ಬೇಕಿಂಗ್‌ ಕ್ಷೇತ್ರದ ಅನನ್ಯಾ ಹರೀಶ್‌, ಮಿಲಾಗ್ರಿಸ್‌ ಕಾಲೇಜಿನ ಬಿಎಸ್‌ಸಿ ಹಾಸ್ಪಿಟಲಿಟಿ ಸೈನ್ಸ್‌ ನ ಎಚ್‌ಒಡಿ ಡೆನಿjಲ್‌ ಡಿ’ಕೋಸ್ತಾ, ಸಹ
àರ್ಪುಗಾರರಾದ ಅನುರಾಧ ಭಟ್‌ ಹಾಗೂ ಮಿಲಾಗ್ರಿಸ್‌ ಕಾಲೇಜಿನ ಉಪ ನ್ಯಾಸಕ ಅರಿತ್‌ ಜೋಯೆಲ್‌ ಪಿಂಟೋ ಉಪಸ್ಥಿತರಿದ್ದರು.ಸ್ಪರ್ಧೆಯಲ್ಲಿ ಭಾಗವಹಿಸಿದ ಎಂಟು ತಂಡಗಳಲ್ಲಿ ಮೂವರು ವಿದ್ಯಾರ್ಥಿಗಳು ಹಾಗೂ ಒಬ್ಬರು ಪೋಷಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next