ಮಂಗಳೂರು: ಖ್ಯಾತ ಕೊಂಕಣಿ ಧಾರಾವಾಹಿ-ನಾಟಕ ನಟ ಸುನಿಲ್ ಬಜಾಲ್ ಅವರು ಮೇ 22 ರಂದು ಭಾನುವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 45 ವರ್ಷ ಪ್ರಾಯವಾಗಿತ್ತು.
Advertisement
ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಸುನಿಲ್ ಅವರು ‘ಗಾಡ್ ಫಾದರ್’ ಮತ್ತು ‘ಕೊಂಬ್ಯಾಟ್’ ಸೇರಿದಂತೆ ಅನೇಕ ಕೊಂಕಣಿ ನಾಟಕಗಳು, ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮಂಗಳೂರಿನ ಕೊಂಕಣಿ ನಾಟಕ ಸಭಾದ ಸದಸ್ಯರೂ ಆಗಿದ್ದರು.
ಅವರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.