Advertisement

Mangaluru: ಡ್ರಗ್ಸ್‌ ಸೇವನೆ: ಐವರ ಬಂಧನ 

08:18 PM Jul 23, 2024 | Team Udayavani |

ಮಂಗಳೂರು: ಮಾದಕ ದ್ರವ್ಯದ ವಿರುದ್ಧ ಮಂಗಳೂರು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು ಡ್ರಗ್ಸ್‌ ಸೇವನೆ ಮಾಡಿರುವ ಮತ್ತೆ 5 ಮಂದಿಯನ್ನು ಬಂಧಿಸಿದ್ದಾರೆ.

Advertisement

ಜು.21ರಂದು ರಾತ್ರಿ 11ಕ್ಕೆ ಡ್ರಗ್ಸ್‌ ಸೇವಿಸಿ ಕುಂಟಿಕಾನದಲ್ಲಿದ್ದ ಕದ್ರಿಯ ಅಪಾರ್ಟ್‌ಮೆಂಟ್‌ ವೊಂದರ ನಿವಾಸಿ ಅನೂಪ್‌ ಕುಮಾರ್‌(45)ನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಜು.22ರಂದು ಸಂಜೆ ಲೇಡಿಹಿಲ್‌ನಲ್ಲಿ ಸಾರ್ವಜನಿಕರ ರಸ್ತೆ ಬದಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಮಹಮ್ಮದ್‌ ಇಕ್ಬಾಲ್‌ ಮತ್ತು  ಸಾಹುಲ್‌ ಹಮೀದ್‌ ದಾವುದ್‌ನನ್ನು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಜು.22ರಂದು ಬೆಳಗ್ಗೆ 11ಕ್ಕೆ ಕುಂಜತ್ತಬೈಲ್‌ ಜಂಕ್ಷನ್‌ ಬಳಿ ಗಾಂಜಾ ಸೇವನೆ ಮಾಡಿರುವ ಮೌಲಾಲಿ(26) ಎಂಬಾತನನ್ನು, ಜು.22ರಂದು ಕೊಂಚಾಡಿ ಬಳಿ ಸಂಜೆ 6ಕ್ಕೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಮಣ್ಣಗುಡ್ಡೆಯ ರಿತೇಶ್‌(25)ನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆ ಪ್ರಕರಣದ ಆರೋಪಿ:

Advertisement

ಹಲ್ಲೆ ಪ್ರಕರಣವೊಂದರಲ್ಲಿ ಕಂಕನಾಡಿ ನಗರ ಠಾಣಾ ಪೊಲೀಸರು ಜು.21ರಂದು ಬಂಧಿಸಿದ ಆರೋಪಿ ಅಂಕಿತ್‌ನನ್ನು ವಿಚಾರಿಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ತಪಾಸಣೆ ನಡೆಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next