Advertisement

ಪಣಂಬೂರು: ಶುಚಿತ್ವ ಕೊರತೆ; ಬೀಚ್‌ ಅಕ್ಕ-ಪಕ್ಕದ ಅಂಗಡಿಗಳಿಗೆ ಜಿಲ್ಲಾಧಿಕಾರಿ ದಿಢೀರ್ ದಾಳಿ

02:26 PM Jan 01, 2023 | Team Udayavani |

ಪಣಂಬೂರು: ಇಲ್ಲಿನ ಬೀಚ್‌ ನಲ್ಲಿರುವ ಆಹಾರ ಮಳಿಗೆಗಳ ಮೇಲೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ದಿಢೀರ್ ದಾಳಿ ನಡೆಸಿ ಹತ್ತಕ್ಕೂ ಅಧಿಕ ಅಂಗಡಿಗಳಲ್ಲಿ ಸ್ವಚ್ಛತೆಯ ಕೊರತೆ ಕಂಡು ಬಂದಿರುವುದರಿಂದ ತಕ್ಷಣ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.

Advertisement

ರವಿವಾರ ಜನ 1 ರಂದು ಪತ್ರಕರ್ತರ ಸಂಘ, ದ.ಕ. ಜಿಲ್ಲಾಡಳಿತ ಸಹಿತ ಬ್ರಾಂಡು ಮಂಗಳೂರಿನ ಪರಿಕಲ್ಪನೆಯಲ್ಲಿ ಸಮುದ್ರ ಕಿನಾರೆಯ ಸ್ವಚ್ಛತೆಗೆ ಯೋಜನೆಯನ್ನು ಹಮ್ಮಿಕೊಂಡು ಅದರಂತೆ ಜಿಲ್ಲಾಧಿಕಾರಿ ಉದ್ಘಾಟನೆಗೆ ಆಗಮಿಸಿದ್ದರು.

ಬಳಿಕ ಆಹಾರ ಸ್ಟಾಲ್‌ ಗಳು ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಪರಿಸರ ಸ್ವಚ್ಛತೆಯ ಕುರಿತು ಕ್ಲಾಸ್ ತೆಗೆದುಕೊಂಡರು.

ಈ ನಡುವೆ ಶೌಚಾಲಯದ ಮುಂಭಾಗ ಅಕ್ರಮವಾಗಿ ಕಟ್ಟಲ್ಪಟ್ಟ ಗೋಬಿ ಮಂಚೂರಿ ಅಂಗಡಿಗೆ ತೆರಳಿದ ಅವರು ಅಲ್ಲಿಯ ಶುಚಿತ್ವದ ಕೊರತೆ ಕಂಡು ತೀವ್ರ ಆಕ್ರೋಷಿತರಾಗಿ ತಕ್ಷಣ ಅಂಗಡಿ ಮುಚ್ಚುವಂತೆ ಆದೇಶ ನೀಡಿದ್ದಾರೆ.

ಕೊಳೆತ ತರಕಾರಿಗಳು, ಹಲವು ದಿನಗಳಿಂದ ಉಪಯೋಗಿಸುತ್ತಿರುವ ಅಡುಗೆ ಎಣ್ಣೆ ಹಾಗೂ ಶೌಚಾಲಯವನ್ನೇ ದಿನಸಿ ಸಾಮಾನುಗಳನ್ನು ಸಂಗ್ರಹಿಸಿ ಇಡಲು ಕೋಣೆಯನ್ನಾಗಿ ಪರಿವರ್ತಿಸಿದ ಬಗ್ಗೆ ಕಂಡು ದಿಗ್ಗಮೆಗೊಂಡರು.

Advertisement

ಬಳಿಕ ಸಮೀಪದ ಎಲ್ಲಾ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಶುಚಿತ್ವದ ಕೊರತೆ ಕಂಡು ಬಂದ ಮಳಿಗೆಗಳ ಮೇಲೆ ಬೀಗ ಮುದ್ರಿಸುವಂತೆ ಸೂಚನೆ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಕ್ಕೆ ಆದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next