Advertisement

ಮಂಗಳೂರಿಗರೇ ಗಮನಿಸಿ ; ನೀವು ತೊಂದರೆಯಲ್ಲಿ ಸಿಲುಕಿದ್ದರೆ ಇವರನ್ನು ಸಂಪರ್ಕಿಸಿ

09:53 AM Dec 20, 2019 | Hari Prasad |

ಮಂಗಳೂರು: ನಿಷೇಧಾಜ್ಞೆಯ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ನಿಯಂತ್ರಸಲು ಪೊಲೀಸರು ಲಾಠೀ ಚಾರ್ಜ್ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಯ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಮಂಗಳೂರಿನ ಕೇಂದ್ರ ಉಪವಿಭಾಗ ವ್ಯಾಪ್ತಿಗೆ ಬರುವ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 20ರ ಮಧ್ಯರಾತ್ರಿವರೆಗೆ ಕರ್ಫ್ಯೂ ವಿಧಿಸಲಾಗಿದೆ.

Advertisement

ಈ ಅನಿರೀಕ್ಷಿತ ಘಟನೆಯಿಂದ ತೊಂದರೆಗೊಳಗಾಗಬಹುದಾದವರಿಗೆ ಸಹಾಯಹಸ್ತ ಚಾಚಲು ಗೌತಮ್ ಬೋಳಾರ್ ಮತ್ತು ಶೈಲೇಶ್ ಕುಮಾರ್ ಎಂಬ ಇಬ್ಬರು ಮಂಗಳೂರಿಗರು ಮುಂದೆ ಬಂದಿದ್ದಾರೆ.

ನಗರದಲ್ಲಿ ಕರ್ಫ್ಯೂ ವಿಧಿಸಿರುವುದರಿಂದ ಬಸ್ಸು ಮತ್ತು ವಾಹನ ಸಂಚಾರ ವ್ಯತ್ಯಯಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಮನೆಗೆ ತಲುಪಲಾಗದೇ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಮತ್ತು ಸಾರ್ವಜನಿಕರ ಸಹಾಯಕ್ಕೆ ಇವರಿಬ್ಬರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.

ಈ ಕುರಿತಾಗಿ ಶೈಲೇಶ್ ಕುಮಾರ್ ಅವರನ್ನು ನಮ್ಮ ವೆಬ್ ಸೈಟ್ ಸಂಪರ್ಕಿಸಿದಾಗ ಅವರು ಹೆಳಿದ್ದು ಹೀಗೆ. ‘ನಗರದಲ್ಲಿ ಅನಿರೀಕ್ಷಿತ ಕರ್ಫ್ಯೂ ವಿಧಿಸಿದ್ದರಿಂದ ತೊಂದರೆಗೊಳಗಾದವರಿಗೆ ನಮ್ಮ ಕೈಲಾದ ಉಚಿತ ಸಹಾಯವನ್ನು ಮಾಡಲು ನಾವು ನಿರ್ಧರಿಸಿದ್ದೇವೆ. ನಾನು ಬೈಕಿನಲ್ಲಿ ಹಾಗೂ ಗೌತಮ್ ಅವರು ಕಾರಿನಲ್ಲಿ ಸಂಕಷ್ಟಕ್ಕೊಳಗಾದವರನ್ನು ಅವರ ಮನೆಗಳಿಗೆ (ಮಂಗಳೂರು ನಗರ ವ್ಯಾಪ್ತಿಯಲ್ಲಿ ಮಾತ್ರ) ಬಿಟ್ಟುಬರುವ ಕಾರ್ಯವನ್ನು ಮಾಡುತ್ತಿದ್ದಾರೆ.’

ಮೊದಲಿಗೆ ಜೆಪ್ಪು ಪ್ರದೇಶ ವ್ಯಾಪ್ತಿಗೆ ನಮ್ಮ ಸೇವೆಯನ್ನು ನೀಡುವ ಉದ್ದೇಶವನ್ನು ಹೊಂದಿದ್ದೆವು ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಾವು ಈ ಕುರಿತಾಗಿ ಹಾಕುತ್ತಿದ್ದಂತೆಯೇ ನಮಗೆ ಹಲವಾರು ಕರೆಗಳು ಬರಲಾರಂಭಿಸಿವೆ. ಸಂಕಷ್ಟಕ್ಕೆ ಒಳಗಾದವರನ್ನು ಅವರ ಮನೆಗಳಿಗೆ ಸುರಕ್ಷಿತವಾಗಿ ತಲುಪಿಸುವ ಕಾರ್ಯವನ್ನು ನಾವು ಮುಂದುವರಿಸುತ್ತಿದ್ದೇವೆ ಎಂದು ಶೈಲೇಶ್ ಅವರು ಹೇಳಿದ್ದಾರೆ.

Advertisement

ಇವರಿಗೆ ನೈತಿಕ ಬಲ ತುಂಬಲು ಬಯಸುವವರು ಮತ್ತು ತಮ್ಮ ಮನೆಗಳಿಗೆ ತೆರಳಲಾಗದೇ ಸಂಕಷ್ಟಕ್ಕೆ ಒಳಗಾಗಿರುವವರು ಗೌತಮ್ ಬೋಳಾರ್ (93418 21331), ಮತ್ತು ಶೈಲೇಶ್ ಕುಮಾರ್ (99023 37423) ಅವರನ್ನು ಸಂರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next