ಮಂಗಳೂರು: ನಗರದ ಬಿಜೈನ ಅಪಾರ್ಟ್‌ಮೆಂಟ್ ಒಂದರಲ್ಲಿ ದಂಪತಿ ಶವ ಪತ್ತೆಯಾಗಿದೆ.
ಬಿಜೈ ನಿವಾಸಿಗಳಾದ ದಿನೇಶ್ (65) ಹಾಗೂ ಶೈಲಜಾ (64) ಮೃತಪಟ್ಟ ದಂಪತಿಗಳು ಎಂದು ತಿಳಿದು ಬಂದಿದೆ.
ಶೈಲಜಾ ಅನಾರೋಗ್ಯ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದು, ಇವರನ್ನು ನೋಡಿಕೊಳ್ಳಲು ಹೋಮ್ ನರ್ಸ್ ಬಂದು ಹೋಗುತ್ತಿದ್ದರು.
ದಿನೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಂಡತಿ ಮೃತಪಟ್ಟಿರುವ ಪಕ್ಕದ ಕೋಣೆಯಲ್ಲೇ ಗಂಡ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
Related Articles
ಮನೆಯಲ್ಲಿ ದಂಪತಿಗಳು ಮಾತ್ರ ವಾಸ ಮಾಡುತ್ತಿದ್ದು, ಮಕ್ಕಳು ಹೊರ ದೇಶದಲ್ಲಿ ಉದ್ಯೋಗದಲ್ಲಿದ್ದಾರೆ ಎನ್ನಲಾಗಿದೆ.
ಉರ್ವ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ಧಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.