ಬಜಪೆ : ನಾರ್ಲಪದವಿನ ಅಬ್ದುಲ್ ರೆಹಮಾನ್ ಅವರು ಮೇ 23ರಂದು ಬೆಳಗ್ಗೆ 4.30ಕ್ಕೆ ಮಸ್ಕತ್‌ಗೆ ಹೋಗಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಮ್ನಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಕಂದಾವರ ತಲುಪುತ್ತಿದ್ದಂತೆ 5 ಮಂದಿ ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಹಿಂದಿನಿಂದ ಬಂದು ಆಮ್ನಿ ಕಾರಿಗೆ ಅಡ್ಡ ನಿಲ್ಲಿಸಿ ಅಬ್ದುಲ್ ರೆಹಮಾನ್ ಅವರನ್ನು ಹೊರಕ್ಕೆ ಎಳೆದು ಚೂರಿ ಮತ್ತು ಮರದ ದೊಣ್ಣೆಯಿಂದ ಹಲ್ಲೆ ಮಾಡಿ ಅವರ ಪಾಸ್‌ಪೋರ್ಟ್, ಹಣ ಮತ್ತು ಮೊಬೈಲ್ ಇರುವ ಸೂಟ್ ಕೇಸ್ ಅನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದು ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಜಪೆ ಠಾಣಾ ಪೊಲೀಸರು ಹತ್ತು ಗಂಟೆ ಅವಧಿಯಲ್ಲಿ 3 ಜನ ಆರೋಪಿಗಳು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.
ಉಪ್ಪಿನಂಗಡಿಯ ನೌರೀಝ್ (30), ನೌಶದ್ (32), ಗಂಜಿಮಠ ಬಡಗುಳಿಪಾಡಿಯ ಅಕ್ಬರ್ (40)ಆರೋಪಿಗಳು.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಮಾರ್ಗದರ್ಶನದಂತೆ ಡಿಸಿಪಿಯವರಾದ ಹರಿರಾಮ್ ಶಂಕರ್ ಮತ್ತು ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಎನ್. ಮಹೇಶ್ ಕುಮಾರ್ ಮತ್ತು ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ (ಪ್ರಭಾರ) ರಾಘವ ಪಡೀಲ್ ಹಾಗೂ ಪಿಎಸ್‌ಐಗಳಾದ ಪೂವಪ್ಪ, ಗುರುವಪ್ಪ ಶಾಂತಿ, ಕಮಲಾ, ಎ.ಎಸ್.ಐ. ರಾಮ ಪೂಜಾರಿ ಮೇರಮಜಲು, ಸಂತೋಷ ಡಿ.ಕೆ. ಸುಳ್ಯ, ರಾಜೇಶ್, ಹೊನ್ನಪ್ಪ ಗೌಡ, ಪುರುಷೋತ್ತಮ್, ರೋಹಿತ್, ರಶೀದ್ ಶೇಖ್, ಮಂಜುನಾಥ ಮತ್ತು ಉಮೇಶ್ ಅವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.